ತಂದೆಯಾದ ನಿಖಿಲ್ ; ದೊಡ್ಡಗೌಡರ ಮನೆಗೆ ಹೊಸ‌ ಅತಿಥಿ ಆಗಮನ!!

ಬೆಂಗಳೂರು :

        ಗೌಡರ ಮನೆಯ ಸೊಸೆ ರೇವತಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ನಟ ನಿಖಿಲ್ ಕುಮಾರಸ್ವಾಮಿ ಅವರು ಅಪ್ಪನಾದ ಖುಷಿಯಲ್ಲಿದ್ದಾರೆ. 

     ಇನ್ನು ನಿಖಿಲ್​ ಅವರಿಗೆ ಗಂಡು ಮಗುವಾದ ವಿಷಯವನ್ನು ಎಚ್​.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದರು. ಅಲ್ಲದೆ ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.

      ಆಸ್ಪತ್ರೆಯಲ್ಲಿ ಮಗನನ್ನು ಕೈಯಲ್ಲಿ ಎತ್ತಿ ಹಿಡಿದ ನಿಖಿಲ್​ ಅವರ ಮುಖದಲ್ಲಿ ಅಪ್ಪನಾಗಿರುವ ಖುಷಿ ಕಾಣುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap