ಬ್ರಹ್ಮಚಾರಿಗಳ ನಡೆ ಮಲೈ ಮಹದೇಶ್ವರನ ಕಡೆಗೆ : ಅವಿವಾಹಿತರಿಗೆ ಮಾತ್ರ

ಬೆಂಗಳೂರು: 

   ನಮ್ಮ ಹಿರಿಯರು ಹೇಳುವ ಪ್ರಕಾರ ಜೀವನ ಪರಿಪೂರ್ಣವಾಗುವುದು ಮದುವೆ ನಂತರದಲ್ಲಿ ಇನ್ನು ನಮ್ಮ ದೇಶದಲ್ಲಿ  ಬ್ರಹ್ಮಚಾರಿಗಳ ಸಂಖ್ಯೆಯೇನು ಕಡಿಮೆ ಇಲ್ಲ. ಈ ಸಂಖ್ಯೆ ಇಳಿಮುಖವಾಗಲೆಂದು  ನಾವು ಆಜನ್ಮ ಬ್ರಹ್ಮಚಾರಿಗಳೆನ್ನವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ  ಅವಿವಾಹಿತ ರಾಗಿರುವವರಿಗಾಗಿ ‘ಬ್ರಹ್ಮಚಾರಿಗಳ ನಡೆ ಮಲೈ ಮಹದೇಶ್ವರನ ಕಡೆಗೆ’ ಮೆರವಣಿಗೆಯನ್ನು ಆಯೋಜಿಸಲಾಗಿದೆ.

      ಈ ಪಾದಯಾತ್ರೆ ಮಂಡ್ಯದಿಂದ ಹೊರಟು ಚಾಮರಾಜನಗರದ ಮುಖ್ಯೇನ ಮಹದೇಶ್ವರ ದೇವಸ್ಥಾನ ತಲುಪಲಿದೆ 3 ದಿನಗಳ ಕಾಲ ನಡೆಯುವ ಪಾದಯಾತ್ರೆಯಲ್ಲಿ ಸುಮಾರು 250 ಬ್ರಹ್ಮಚಾರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

    ನಡಿಗೆಯಲ್ಲಿ ಭಾಗವಹಿಸುವವರಿಗೆ ವಯೋಮಿತಿ ನಿಗದಿಪಡಿಸಿರುವುದರಿಂದ ಈ ಪಾದಯಾತ್ರೆ ವಿಶಿಷ್ಟವಾಗಿದೆ ಎಂದು ಆಯೋಜಕ  ಶಿವಪ್ರಭು ತಿಳಿಸಿದರು. 

    ನಾವು 30 ವರ್ಷ ದಾಟಿದ ನಂತರವೂ ಮದುವೆಯಾಗದ ಕೆಲವು ಸ್ನೇಹಿತರೊಂದಿಗೆ ಪ್ರಾರಂಭಿಸಿ  ನಂತರ ನಾವು ನಮ್ಮ ಚಿಂತನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೆವು. ಅದು ವೈರಲ್ ಆಯಿತು. ನಂತರ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ಬೆಂಗಳೂರಿನಿಂದ 150 ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ 250 ನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದೇವೆ. ಆದಾಗ್ಯೂ, 250 ಕ್ಕಿಂತ ಹೆಚ್ಚು ಜನರು ನೋಂದಾಯಿಸಿಕೊಂಡರೆ, ಎರಡು ಬ್ಯಾಚ್‌ಗಳನ್ನಾಗಿ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link