ಶಿವಮೊಗ್ಗ:
ನಗರದಲ್ಲಿ ಭಾನುವಾರದಂದು ಹತ್ಯೆಗೀಡಾದಂತ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 7 ಮಂದಿ ಆರೋಪಿಗಳನ್ನು ಬಂದಿಸಿದ್ದಾರೆ. ಆದ್ರೇ ನಮ್ಮ ಮಕ್ಕಳು ಅಮಾಯಕರು. ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ.
ಅನಗತ್ಯವಾಗಿ ಬಂಧಿಸಲಾಗಿದೆ ಎಂಬುದಾಗಿ ಕುಟುಂಬಸ್ಥರು ಅಳಲು ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವಂತ ನದೀಮ್ ಅವರ ತಾಯಿ ಪರ್ವಿನ್ ತಾಜ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ನನ್ನ ಮಗನಿಗೆ ಯಾರ್ ಸಿತ್ತಿದ್ದಾರೆ, ಏನ್ ನಡೆದಿದೆ ಎನ್ನುವುದೇ ಗೊತ್ತಿಲ್ಲ. ಹೀಗೆ ಏನೂ ತಿಳಿಯದ ನನ್ನ ಮಗನನ್ನು ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ಅವನು ತಪ್ಪು ಮಾಡಿದ್ರೇ ಬಂಧಿಸಿ ಎಂಬುದಾಗಿ ಕಣ್ಣೀರಿಡುತ್ತ ಹೇಳಿದ್ದಾರೆ.
ಹರ್ಷ ಹತ್ಯೆಯಾದ ದಿನದಂದು ನದೀಮ್ ಮನೆಯಲ್ಲಿಯೇ ಇದ್ದನು. ಆತನಿಗೆ ಹುಷಾರ್ ಇಲ್ಲದ ಕಾರಣ, ನಾನೇ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ. ಅಲ್ಲದೇ ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗಬೇಕು ಅಂತ ಬೇಗವೇ ಮಲಗಿದ್ದನು. ಅವನ ಬಗ್ಗೆ ಅವನು ಕೆಲಸಕ್ಕೆ ಹೋಗುವಂತ ಮೇಸ್ತ್ರಿಯನ್ನು ಕೇಳಿ ಎಂಬುದಾಗಿ ಹೇಳಿದರು.
ನನ್ನ ಮನಗನಿಗೂ ಹರ್ಷ ಕೊಲೆಗೂ ಯಾವುದೇ ಸಂಬಂಧವಿಲ್ಲ. ನನ್ನ ಮನನಿಗೆ ಬೇಕು ಎಂದೇ ತೊಂದರೆ ಕೊಡುತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸಿ, ಸುಮ್ಮನೇ ಏನೂ ತಪ್ಪು ಮಾಡದಂತ ನನ್ನ ಮಗನನ್ನು ಪೊಲೀಸರು ಬೆಳಗಿನ ಜಾವ 3 ಗಂಟೆಗೆ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
