ಗಣೇಶ ವಿಸರ್ಜನೆ ವೇಳೆ ಅವಘಡ; ಬಾಲಕ ಸಾವು , 6 ಜನರಿಗೆ ಗಾಯ

ದೊಡ್ಡಬಳ್ಳಾಪುರ :

    ಗಣೇಶ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ. ಘಟನೆ ಯಲ್ಲಿ ಪೊಲೀಸ್‌ ಸಿಬ್ಬಂದಿ ಸೇರಿ ಆರು ಮಂದಿಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್​ನಲ್ಲಿ ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಫ್ರೆಂಡ್ಸ್ ವಿನಾಯಕ ಬಳಗ ಗಣೇಶನ ವಿಸರ್ಜನೆ ಮಾಡಲು ಮೆರವಣಿಗೆಯಲ್ಲಿ ಹೊರಟಿತ್ತು. ಪೋರ್ ಲಿಫ್ಟ್ ವಾಹನದಲ್ಲಿ ಗಣೇಶನ ಮೆರವಣಿಗೆ ಮಾಡಲಾಗುತ್ತಿತ್ತು.

   ಈ ವೇಳೆ ಪೋರ್ ಲಿಫ್ಟ್ ವಾಹನದಲ್ಲಿ ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡು ಅನಾಹುತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿದರು. ವಾಹನದಲ್ಲಿ ಗಣೇಶನನ್ನ ಮೆರವಣಿಗೆ ಮಾಡುವಾಗ, ಕಾರ್ಯಕ್ರಮದ ಆಯೋಜಕರು ವಾಹನದ ಸೈಲೆಂಸ್ಸರ್ ಪಕ್ಕದಲ್ಲಿಯೇ ಪಟಾಕಿ ಇಟ್ಟಿದ್ದರು. ಸೈಲೆಂಸ್ಸರ್ ತಾಪಕ್ಕೆ ಪಟಾಕಿಗಳು ಸ್ಫೋಟಗೊಂಡಿವೆ. ರಾಕೆಟ್ ಗಳು ಸುತ್ತಮುತ್ತ ಹಾಗೂ ಕೆಲವು ವ್ಯಕ್ತಿಗಳ ಮೇಲೆ ನುಗ್ಗಿವೆ.

   ಘಟನೆಯಲ್ಲಿ ರಾಕೆಟ್ ಗಳು 12 ವರ್ಷದ ಬಾಲಕ ತನುಷ್ ರಾವ್ ಪೆಕ್ಕೆಲುಬುಗಳಿಗೆ ನುಗ್ಗಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಒಬ್ಬ ಬಾಲಕ ಸಾವನ್ನಪ್ಪಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತನುಶ್ ರಾವ್ (15) ಮೃತ ದುರ್ದೈವಿ. ಗಣೇಶ್, ಯೋಗೀಶ್, ಮುನಿರಾಜು, ಚಾಲಕ ನಾಗರಾಜ್, ಚೇತನ್ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪೊಲೀಸ್ ಪೇದೆ ಜಾಕಿರ್ ಹುಸೇನ್​ಗೆ ಗಾಯವಾಗಿದೆ. ಗಾಯಾಳುಗಳನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

   ಶ್ರೀ ಪ್ರೆಂಡ್ಸ್ ಯುವಕರ ತಂಡದಿಂದ ಗಣಪತಿ ವಿಸರ್ಜನೆ ನಡೆಯುತ್ತಿತ್ತು. ಯುವಕರು ಗಣೇಶ ಮೂರ್ತಿಯಿಟ್ಟ ವಾಹನದಲ್ಲಿ ಪಟಾಕಿ ಇಟ್ಟಿದ್ದರು. ವಾಹನದ ಶಾಕಕ್ಕೆ ಏಕಾಏಕಿ ಪಟಾಕಿ ಸ್ಫೋಟಗೊಂಡಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

Recent Articles

spot_img

Related Stories

Share via
Copy link