ಚೀನಿಯರಿಗೆ ಶುರುವಾಯ್ತ ಬಲೂಚಿ ಕಂಟಕ…..!

ಖೈಬರ್

    ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ.ಸ್ಥಳೀಯ ಅಧಿಕಾರಿಗಳ ಪ್ರಕಾರ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಶಾಂಗ್ಲಾದಲ್ಲಿ ಆತ್ಮಾಹುತಿ ಬಾಂಬರ್ ನಡೆಸಿದ ಬಾಂಬ್ ಸ್ಫೋಟದಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ದಾಳಿಕೋರರು ನೌಕಾ ವಾಯು ನೆಲೆಯ ಮೇಲೆ ದಾಳಿ ಮಾಡಿದ್ದು ಇದರಲ್ಲಿ ಒಬ್ಬ ಯೋಧ ಸಹ ಸಾವನ್ನಪ್ಪಿದ್ದಾರೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಈ ವಾಯುನೆಲೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ. 

    ಪಾಕಿಸ್ತಾನದಲ್ಲಿ ಪ್ರತಿದಿನ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಇದಕ್ಕೂ ಮೊದಲು ಮಾರ್ಚ್ 20ರಂದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಯೋಧರು ಗ್ವಾದರ್ ಬಂದರನ್ನು ಗುರಿಯಾಗಿಸಿಕೊಂಡಿದ್ದರು. ಪಾಕಿಸ್ತಾನವು ಚೀನಾದ ಸಹಾಯದಿಂದ ಈ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ಸ್ಥಳೀಯ ಬಲೂಚ್ ಜನಸಂಖ್ಯೆಯು ವಿರೋಧಿಸುತ್ತಿದೆ. ಚೀನೀ ನಾಗರಿಕರು ಸಾಮಾನ್ಯವಾಗಿ BLA ಅಥವಾ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಿಂದ ಗುರಿಯಾಗುತ್ತಾರೆ.

     ಬಲೂಚಿಗರು ದಶಕಗಳಿಂದ ಪಾಕಿಸ್ತಾನ ಸರ್ಕಾರದ ವಿರುದ್ಧ ಬಂಡಾಯವೆದ್ದಿದೆ. ಆದರೆ ಇದರ ಹೊರತಾಗಿಯೂ, ಚೀನಾ ಇಲ್ಲಿ ಭಾರಿ ಹೂಡಿಕೆ ಮಾಡಿದೆ. ಉದಾಹರಣೆಗೆ, ಚೀನಾವು ಪಾಕಿಸ್ತಾನದಿಂದ ತನ್ನ ದೇಶಕ್ಕೆ ಆರ್ಥಿಕ ಕಾರಿಡಾರ್ ಅನ್ನು ನಿರ್ಮಿಸುತ್ತಿದೆ. ಇದರಲ್ಲಿ ಗ್ವಾದರ್ ಬಂದರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಲೂಚಿಸ್ತಾನದ ಬಹುಪಾಲು ಭಾಗವು ಈ ಸಿಪಿಇಸಿ ಯೋಜನೆಯ ಭಾಗವಾಗಿದೆ. ಇದನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಹೋರಾಟಗಾರರು ವಿರೋಧಿಸುತ್ತಾರೆ ಮತ್ತು ಪ್ರತಿನಿತ್ಯ ದಾಳಿಗಳನ್ನು ನಡೆಸುತ್ತಾರೆ.

Recent Articles

spot_img

Related Stories

Share via
Copy link
Powered by Social Snap