ಬಂದೇ ಬಿಡ್ತು ತೂಫಾನ್​; ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಕೆಜಿಎಫ್​:

ಚಾಪ್ಟರ್​ 2′ ಸಿನಿಮಾದ ‘ತೂಫಾನ್​..’ ಹಾಡು ಬಿಡುಗಡೆ ಆಗಿದೆ. ಲಿರಿಕಲ್​ ಸಾಂಗ್​ ನೋಡಿ ಯಶ್​ ಫ್ಯಾನ್ಸ್​ ಖುಷಿಯಾಗಿದ್ದಾರೆ.ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ.

ಈವರೆಗೂ ಕೇವಲ ಒಂದಷ್ಟು ಪೋಸ್ಟರ್​ ಮತ್ತು ಒಂದು ಟೀಸರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾ ಈಗ ಮೊದಲ ಸಾಂಗ್​ ಬಿಡುಗಡೆ ಮಾಡಿದೆ. ‘ತೂಫಾನ್​..’ ಲಿರಿಕಲ್​ ವಿಡಿಯೋ  ರಿಲೀಸ್​ ಆಗಿದೆ. ಈ ಹಾಡನ್ನು ಬಿಡುಗಡೆ ಮಾಡುವ ಬಗ್ಗೆ ಎರಡು ದಿನ ಮುನ್ನವೇ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ತಿಳಿಸಲಾಗಿತ್ತು.

ಆಗಲೇ ಜನರ ನಿರೀಕ್ಷೆ ಮುಗಿಲುಮುಟ್ಟಿತ್ತು. ಆ ನಿರೀಕ್ಷೆಗೆ ತಕ್ಕಂತೆಯೇ ಚಿತ್ರದಿಂದ ‘ತೂಫಾನ್​..’ ಹಾಡು ಮೂಡಿಬಂದಿದೆ. ಸಾಂಗ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ

ಯಶ್​  ಅವರನ್ನು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ ಬಗ್ಗೆ ಹೈಪ್​ ಸೃಷ್ಟಿ ಆಗಲು ಹಲವು ಕಾರಣಗಳಿವೆ. ‘ತೂಫಾನ್​..’ ಲಿರಿಕಲ್​ ಸಾಂಗ್​ ಬಿಡುಗಡೆ ಆದ ಬಳಿಕ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಗ್ಗೆ ಇನ್ನಷ್ಟು ಟಾಕ್​ ಹೆಚ್ಚಾಗಿದೆ.

ಇಂದು (ಮಾ.21) ಬೆಳಗ್ಗೆ 11.07ಕ್ಕೆ ‘ತೂಫಾನ್​’ ಲಿರಿಕಲ್​ ವಿಡಿಯೋ ಬಿಡುಗಡೆ ಆಯಿತು. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್​ ಹಾಡು ಲಕ್ಷಾಂತರ ವೀವ್ಸ್​ ಪಡೆದುಕೊಂಡಿದೆ. ಆ ಮೂಲಕ ಚಿತ್ರದ ಬಗ್ಗೆ ಜನರಿಗೆ ಇರುವ ಕ್ರೇಜ್​ ಎಂಥದ್ದು ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಬಿಡುಗಡೆ ಆಗಲಿದೆ. ಆ ಎಲ್ಲ ಭಾಷೆಗಳಲ್ಲೂ ‘ತೂಫಾನ್​’ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಮಾಡಲಾಗಿದೆ. ಎಲ್ಲ ಭಾಷೆಯಲ್ಲೂ ಜನರಿಂದ ಸಖತ್​ ರಿಯಾಕ್ಷನ್​ ಸಿಗುತ್ತಿದೆ.

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಗೆಲ್ಲಲು ಹಾಡುಗಳು ಕೂಡ ಪ್ರಮುಖ ಕಾರಣ ಆಗಿದ್ದವು. ಸಖತ್​ ಮಾಸ್​ ಆದಂತಹ ಹಾಡುಗಳನ್ನು ರವಿ ಬಸ್ರೂರು ನೀಡಿದ್ದರು. ಈಗ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಸಾಂಗ್ಸ್​ ಮೇಲೆ ಅದೇ ಮಟ್ಟದ ನಿರೀಕ್ಷೆ ಇದೆ.

ದುಬಾರಿ ವೈದ್ಯಕೀಯ ಶಿಕ್ಷಣ: ಕೇಂದ್ರದಿಂದ ಗಂಭೀರ ಚಿಂತನೆ

ಸದ್ಯ ಮೊದಲ ಹಾಡು ಬಿಡುಗಡೆ ಆಗಿದ್ದು, ಅದಕ್ಕೆ ರವಿ ಬಸ್ರೂರು ಅವರೇ ಸಾಹಿತ್ಯ ಬರೆದಿದ್ದಾರೆ. ಇನ್ನುಳಿದ ಹಾಡುಗಳಿಗಾಗಿ ಫ್ಯಾನ್ಸ್​ ಕಾಯುವಂತಾಗಿದೆ. ಸದ್ಯ ರಿಲೀಸ್​ ಆಗಿರಯವ ‘ತೂಫಾನ್​’ ಹಾಡಿನಲ್ಲಿ ಕೆಲವು ಡೈಲಾಗ್​ಗಳು ಕೂಡ ಹೈಲೈಟ್​ ಆಗಿವೆ. ಅವುಗಳನ್ನು ಕೇಳಿ ಸಿನಿಪ್ರಿಯರು ಎಂಜಾಯ್​ ಮಾಡುತ್ತಿದ್ದಾರೆ.

ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಈಗಾಗಲೇ ವಿದೇಶದ ಥಿಯೇಟರ್​ಗಳಲ್ಲಿ ನಿಲ್ಲಿಸಲು ಸ್ಟ್ಯಾಂಡಿಗಳನ್ನು ಸಿದ್ಧಪಡಿಸಲಾಗಿದೆ. ಸಂಜಯ್​ ದತ್​, ರವೀನಾ ಟಂಡನ್​ ನಟಿಸಿರುವುದರಿಂದ ಬಾಲಿವುಡ್​ ವಲಯದಲ್ಲೂ ‘ಕೆಜಿಎಫ್​ 2’ ಚಿತ್ರಕ್ಕೆ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಕಾಶ್​ ರಾಜ್​, ಮಾಳವಿಕಾ ಅವಿನಾಶ್​, ರಾವ್​ ರಮೇಶ್​ ಮುಂತಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link