ಮಧುಗಿರಿ :-
ಇತಿಹಾಸ ಪ್ರಸಿದ್ಧ ಮಧುಗಿರಿ ಬಂದ್ರೇಹಳ್ಳಿ ತೇರಿನ ಬೀದಿಯ ಒಲಬಿನ ಶ್ರೀ ಮೀನ ಗೊಂದಿ ಮಲೇ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟದ ಮೇಲ್ಭಾಗದಲ್ಲಿ ಅಗಸ್ಟ್ 29 29ರ ಶುಕ್ರವಾರ ಬೆಳಗ್ಗೆ 9.30 ಕ್ಕೆ ಶ್ರೀ ನಾಗ ಪ್ರತಿಷ್ಠಾಪನಾ ಮಹೋತ್ಸವವನ್ನು ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವತಾ ಕಾರ್ಯವನ್ನ ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಶ್ರೀ ರಂಗಶಾಮಯ್ಯ ಹಾಗೂ ಶ್ರೀಮತಿ ಲಕ್ಷ್ಮಮ್ಮ ರಂಗಯ್ಯ ಪ್ರಕಟ ಅಡಿಯಲ್ಲಿ ತಿಳಿಸಿದ್ದಾರೆ.
ಮಧುಗಿರಿ ತಾಲೂಕು ಕಸಬಾ ಹೋಬಳಿ ಬಂದ್ರೇಹಳ್ಳಿ ಕೇರಿನ ಬೀದಿಯ ಶ್ರೀ ಮೀನ ಗೊಂದಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ನಾಗ ಪ್ರತಿಷ್ಠಾಪನ ಮಹೋತ್ಸವ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ದೇವತಾ ಕಾರ್ಯಗಳನ್ನ ಮಧುಗಿರಿ ತಾಲೂಕು ಕಸಬಾ ಹೋಬಳಿ ಹಳೆಹಟ್ಟಿ ಗ್ರಾಮದ ಮಡಿವಾಳ ಸಮುದಾಯದ ಶ್ರೀ ರಂಗಶಾಮಯ ಮತ್ತು ಕುಟುಂಬ ವರ್ಗ ಲಕ್ಷ್ಮಮ್ಮ ರಂಗಪ್ಪನವರ ಹಾಗೂ ಗಿರಿಜಮ್ಮ ಮಂಜುನಾಥ್ ಅವರ ಕುಟುಂಬ ವರ್ಗದಿಂದ ಹಲವು ದೇವತಾ ಕಾರ್ಯಗಳನ್ನ ಹಮ್ಮಿಕೊಳ್ಳಲಾಗಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ, ಇದೇ ಸಂದರ್ಭದಲ್ಲಿ 9 ಮಂದಿ ಬುಡ್ಕಟ್ಟಿನ ಧರ್ಮ ಕರ್ತರು , ಕಟ್ಟೆಮನೆ ಯಜಮಾನರು, ಗೌಡ್ರು ಯಜಮಾನ್ರು ಸೇರಿದಂತೆ ಹಲವು ಭಕ್ತರು ಆಗಮಿಸುತ್ತಿದ್ದು ಸದ್ಭಕ್ತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿಕೊಂಡಿದ್ದಾರೆ.
