ಚುನಾವಣೆಯಲ್ಲಿ ಸೋತರೂ ಸಿಎಂ ಗದ್ದುಗೆಗೇರಿದ ಮಮತಾ ಬ್ಯಾನರ್ಜಿ

ಕೋಲ್ಕತಾ :

     ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ.

     ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಜಗದೀಪ್ ಧನ್‍ಖಡ್ ಪ್ರಮಾಣ ವಚನ ಬೋಧಿಸಿದರು. ಈ ಸಮಾರಂಭದಲ್ಲಿ ಟಿಎಂಸಿಯ ಚುನಾವಣೆಯ ರಣತಂತ್ರಗಾರ ಪ್ರಶಾಂತ್ ಕಿಶೋರ್, ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರದೀಪ್ ಭಟ್ಟಾಚಾರ್ಯ ಸೇರಿದಂತೆ ಬೆರಳಿಕೆಯಷ್ಟು ಟಿಎಂಸಿ ನಾಯಕರು ಉಪಸ್ಥಿತರಿದ್ದರು. ಮಮತಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ಇಂದು ಪ್ರಮಾಣ ವಚನ ಪಡೆಯಲಿಲ್ಲ.

     ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದ್ರ ಅಧಿಕಾರಿ ವಿರುದ್ಧ ಪರಾಭವಗೊಂಡಿದ್ದಾರೆ. ಆದರೂ ಅವರು ಮುಖ್ಯಮಂತ್ರಿಯಾಗಲು ಕಾನೂನಿನಡಿ ಅವಕಾಶವಿದೆ.

    ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದ್ರ ಅಧಿಕಾರಿ ವಿರುದ್ಧ ಪರಾಭವಗೊಂಡಿದ್ದಾರೆ. ಆದರೂ ಅವರು ಮುಖ್ಯಮಂತ್ರಿಯಾಗಲು ಕಾನೂನಿನಡಿ ಅವಕಾಶವಿದೆ. ಕಾನೂನಿನಲ್ಲಿ ಇರುವಂತೆ ಪರಾಭವಗೊಂಡರೂ ಸಿಎಂ ಖುರ್ಚಿಗೆ ಏರಲು ಆರು ತಿಂಗಳ ಒಳಗೆ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಬೇಕು. ಇಲ್ಲದೇ ಹೋದರೆ ಯಾವುದಾದರೂ ಖಾಲಿ ಇರುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಆರು ತಿಂಗಳ ಒಳಗೆ ಉಪಚುನಾವಣೆಯಲ್ಲಿ ಗೆಲ್ಲಬೇಕು. ಒಂದು ವೇಳೆ ಅಲ್ಲಿಯೂ ಸೋತರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವಿಧಾನಪರಿಷತ್‌ ನಿರ್ಮೂಲನ ಮಾಡಲಾಗಿದೆ. ಆದ್ದರಿಂದ ಇರುವ ಮಾರ್ಗ ಎಂದರೆ ಉಪ ಚುನಾವಣೆ ಮಾಡಿ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ ಮುಖ್ಯಮಂತ್ರಿಯ ಅಧಿಕಾರವನ್ನು ದೀದಿ ಕಳೆದುಕೊಳ್ಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap