ತೋಟಗಾರಿಕೆ ಪಿತಾಮಹರ 104 ನೇ ಜನ್ಮದಿನಾಚರಣೆ!

ಬೆಂಗಳೂರು :

     ನದ ಅಂಗವಾಗಿ ತೋಟಗಾರಿಕೆ ದಿನ ಆಚರಿಸಲಾಯಿತು.

      ಲಾಲ್ ಭಾಗ್ ನಲ್ಲಿರುವ ಮರಿಗೌಡ ಅವರ ಪುತ್ತಳಿಗೆ ತೋಟಗಾರಿಕೆ ಸಚಿವ ಡಾ| ನಾರಾಯಣಗೌಡ ಅವರು ಮಾಲಾರ್ಪಣೆ ಮಾಡಿದ್ರು. ಬಳಿಕ ಸಚಿವರು ತೋಟಗಾರಿಕೆ ದಿನದ ಅಂಗವಾಗಿ ಸಸಿ ನೆಟ್ಟರು.

       ಇದೆ ಸಂದರ್ಭದಲ್ಲಿ ಡಾ. ಎಂ.ಹೆಚ್. ಮರಿಗೌಡ ಅವರ ಹೆಸರನ್ನು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಇಡುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

      ಕಾರ್ಯಕ್ರಮದಲ್ಲಿ ಮರಿಗೌಡ ಅವರ ಕುಟುಂಬ ಸದಸ್ಯರು. ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್, ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿಗಳು, ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ