ಬೆಂಗಳೂರು :
ರೌಡಿಯೊಬ್ಬನನ್ನು 8 ಮಂದಿ ದುಷ್ಕರ್ಮಿಗಳು ಹಾಡುಹಗಲೇ ಬ್ಯಾಂಕ್ ಒಳಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ರಾಜಧಾನಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಬ್ಲು ಕೊಲೆಯಾಗಿರುವ ರೌಡಿ. ಪತ್ನಿಯೊಂದಿಗೆ ಕೋರಮಂಗಲ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆ (ಕಾಪೆರ್ರೇಷನ್ ಬ್ಯಾಂಕ್)ಗೆ ಬಬ್ಲು ಬಂದಿದ್ದನು. ಆತನನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಬ್ಯಾಂಕ್‍ನೊಳಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪರಿಶೀಲನೆ ನಡೆಸಿ ಬ್ಯಾಂಕ್ ಬಳಿಯ ಸಿಸಿ ಟಿವಿಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ