ಬೆಂಗಳೂರು : ಮಳೆ ಬೆನ್ನಲ್ಲೇ ಹೆಚ್ಚಾದ ಸಾಂಕ್ರಾಮಿಕ ರೋಗಗಳ ಆತಂಕ

ಬೆಂಗಳೂರು

     ಮೂರ್ನಾಲ್ಕು ದಿನಗಳಿಂದ  ಭಾರಿ ಮಳೆಯಾಗಿ   ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಕೊಳಚೆ ಆವರಿಸಿದೆ. ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಬಿಸಿಲಿನಿಂದ ಕೂಡಿದ್ದ ವಾತಾವರಣ ಏಕಾಏಕಿ ಥಂಡಿಯಾಗಿದೆ. ಜೊತೆಗೆ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರವಾಗಿದೆ. ಇದರಿಂದಾಗಿ ಏಕಾಏಕಿ ಇದೀಗ ಸಾಂಕ್ರಾಮಿಕ ರೋಗಗಳು  ಹೆಚ್ಚಾಗತೊಡಗಿವೆ. ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಹಳು ಹೆಚ್ಚಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 30 ರಷ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆಲ್ಲ ಸಿಲಿಕಾನ್ ಸಿಟಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

   ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹೆಚ್ಚಾಗಿ ಜ್ವರ ಕಂಡುಬರುತ್ತಿದೆ. ಮನೆಯಲ್ಲಿ ಸೋಂಕು ತಗುಲಿದವರಿಂದ ಮನೆ ಮಂದಿಗೆಲ್ಲ ಹರಡುತ್ತಿದೆ. ಡೆಂಗ್ಯೂ, ಮಲೇರಿಯಾದಂತಹ ಜ್ವರ ಪತ್ತೆಗೆ ಗುಣಲಕ್ಷಣ ಕಂಡುಬಂದ ರೋಗಿಗಳಿಗೆ ಪರೀಕ್ಷೆ ಮಾಡಿಸಲಾಗುತ್ತಿದೆ. ಜನರು ಆರೋಗ್ಯದಲ್ಲಿ ಸಣ್ಣ ಬದಲಾವಣೆಯಾದರೂ ನಿರ್ಲಕ್ಷ್ಯವಹಿದಂತೆ ವೈದ್ಯೆ ಡಾ. ಪಲ್ಲವಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆ ಬಗ್ಗೆ ‘ಟಿವಿ9’ ಕಳೆದ ವಾರವಷ್ಟೇ ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ 240 ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ 700 ಸ್ವಯಂ ಸೇವಕರನ್ನು ನೇಮಿಸಿದೆ. ಕರ್ನಾಟಕದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿಯೇ ಶೇ 40 ರಿಂದ 50 ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದ್ದು, ನಾಗರಿಕರು ಕೂಡ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
   ಒಟ್ಟಿನಲ್ಲಿ ಡೆಂಗ್ಯೂ ಹಾವಳಿ ಜೊತೆಗೆ ಈಗ ಹೆಚ್ಚಾಗುತ್ತಿರುವ ವೈರಾಣು ಜ್ವರ ಆತಂಕಕ್ಕೆ ಕಾರವಾಗಿದೆ. ಹೀಗಾಗಿ ಜನರು ಸ್ವಚ್ಛತೆ ಕಾಪಾಡುವುದು ಹಾಗೂ ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Recent Articles

spot_img

Related Stories

Share via
Copy link