ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದ ತಾರೆಯರು ಬಣ್ಣಹಚ್ಚಿರುವ ಚಿತ್ರ ಬಾಕ್ಸಾಫೀಸ್ನಲ್ಲಿ ಜಯಭೇರಿ ಬಾರಿಸಿದ್ದು, ಈಗಾಗಲೇ ಚಿತ್ರದ ಗಳಿಕೆ 400 ಕೋಟಿ ರೂ ದಾಟಿದೆ. ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಹೊಸ ಒಪ್ಪಂದ ಮಾಡಿಕೊಂಡಿದ್ದವು.
ಕ್ರೀಡೆ ಹಾಗೂ ಮನರಂಜನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಜತೆಯಾಗಿ ಸಾಗುವುದಾಗಿ ಎರಡೂ ಸಂಸ್ಥೆಗಳು ಘೋಷಿಸಿದ್ದವು. ಎಲ್ಲೆಡೆ ‘ಕೆಜಿಎಫ್’ ಟ್ರೆಂಡ್ ಜೋರಾಗಿರುವಂತೆಯೇ ಐಪಿಎಲ್ ಬಯೋಬಬಲ್ ಒಳಗಡೆಯೇ ಆರ್ಸಿಬಿ ಆಟಗಾರರು ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸುತ್ತಿದ್ದಾರೆ. ಹೌದು. ಇಂದು (ಏ.17) ಆರ್ಸಿಬಿ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದು, ಶೋ ಆರಂಭಗೊಂಡಿದೆ ಎಂದು ಬರೆದುಕೊಂಡಿದೆ.
‘ಆರ್ಸಿಬಿ ಬಯೋಬಬಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ವಿಶೇಷ ಪ್ರದರ್ಶನ. ಬ್ಲಾಕ್ಬಸ್ಟರ್ ಚಿತ್ರವನ್ನು ವೀಕ್ಷಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಆರ್ಸಿಬಿ ಟ್ವೀಟ್ ಮಾಡಿದೆ. ನಟ, ನಿರೂಪಕ ದಾನಿಶ್ ಸೇಠ್ ಚಿತ್ರ ಪ್ರದರ್ಶನದ ಫೋಟೋ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ
ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್ಸಿಬಿ ಸಹಯೋಗವು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಾರಣ, ಐಪಿಎಲ್ ತಂಡ ಹಾಗೂ ನಿರ್ಮಾಣ ಸಂಸ್ಥೆಯೊಂದು ಮೊಟ್ಟಮೊದಲ ಬಾರಿಗೆ ಕೈಜೋಡಿಸಿದ್ದವು. ಬೆಂಗಳೂರೇ ತವರೂರಾಗಿರುವ ಎರಡೂ ಸಂಸ್ಥೆಗಳ ಮುಂದಿನ ಸಹಯೋಗದ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದರು.
545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಬಿಜೆಪಿಯ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಬಂಧನ
ನಂತರದಲ್ಲಿ ಆರ್ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿವೆ. ಆರ್ಸಿಬಿ ತಂಡದಲ್ಲಿರುವ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಕಪ್ತಾನ ಫಾಫ್ಡು ಪ್ಲೆಸಿಸ್ರನ್ನು ‘ಕೆಜಿಎಫ್’ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದಾರೆ. ಚಿತ್ರದ ರಿಲೀಸ್ ಸಂದರ್ಭದಲ್ಲಿ ಆರ್ಸಿಬಿ ಆಟಗಾರರನ್ನು ಒಳಗೊಂಡ ‘ಕೆಜಿಎಫ್’ ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿತ್ತು. ಅದು ವೈರಲ್ ಆಗಿತ್ತು. ಇದೀಗ ಆರ್ಸಿಬಿ ತಂಡ ಚಿತ್ರ ವೀಕ್ಷಣೆ ನಡೆಸುತ್ತಿದ್ದು, ತಾರಾ ಆಟಗಾರರ ಪ್ರತಿಕ್ರಿಯೆ ಹೇಗಿರಬಹುದು ಎಂಬುದರ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
