ಬೆಂಗಳೂರು:
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಗೆ ವಿಳಂಬವಾಗಿದ್ದ ದೇವಸ್ಥಾನವನ್ನು ಸ್ಥಳಾಂತರ ಮಾಡಲಾಗಿದ್ದು, ಉಳಿದ 400 ಮೀಟರ್ ರಸ್ತೆಯನ್ನು ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಣಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬರುವ ಒಟ್ಟು 260 ಕಿಮೀ ಎಕ್ಸ್‌ಪ್ರೆಸ್ ವೇ 71 ಕಿಮೀ ವಿಸ್ತರಣೆಯು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. ಹೊಸಕೋಟೆ ಬಳಿಯಿರುವ ಜಿನ್ನಾಗರ ಕ್ರಾಸ್‌ನಲ್ಲಿರುವ ದೇವಸ್ಥಾನವನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಕಾಮಗಾರಿ ವಿಳಂಬವಾಯಿತು ಎಂದರು. 400 ಮೀಟರ್ ವಿಸ್ತರಣೆಯನ್ನು ಹೊರತುಪಡಿಸಿ, ಕರ್ನಾಟಕದಲ್ಲಿ ಬರುವ ಎಕ್ಸ್‌ಪ್ರೆಸ್‌ವೇಯ ಸಂಪೂರ್ಣ 71 ಕಿಮೀ ಉದ್ದ ಸಿದ್ಧವಾಗಿದೆ. ಈಗ ದೇವಸ್ಥಾನ ಸ್ಥಳಾಂತರಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ’ ಎಂದು ಬ್ರಹ್ಮಾಂಕರ್ ವಿವರಿಸಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಎಂಬ ಮೂರು ರಾಜ್ಯಗಳ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಮಾರ್ಗವಾಗಿದೆ. ಈ ಕಾಮಗಾರಿಯನ್ನು 17,900 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎಕ್ಸ್‌ಪ್ರೆಸ್‌ವೇ, ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಮೀ ಇರಲಿದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ ಆರು ಗಂಟೆಗಳಿಂದ ಮೂರು ಗಂಟೆಗಳಿಗಿಂತ ಕಡಿಮೆ ಮಾಡುವ ನಿರೀಕ್ಷೆಯಿದೆ. ನಾಲ್ಕು-ಲೇನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ಕರ್ನಾಟಕದಲ್ಲಿ ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಪ್ಯಾಕೇಜ್ 1 ಹೊಸಕೋಟೆಯಿಂದ ಮಾಲೂರಿಗೆ 27.1 ಕಿ.ಮೀ, ಪ್ಯಾಕೇಜ್ 2 ಮಾಲೂರು ಮತ್ತು ಬಂಗಾರಪೇಟೆ ನಡುವೆ 27.1 ಕಿ.ಮೀ ಮತ್ತು ಪ್ಯಾಕೇಜ್ 3 ಬಂಗಾರಪೇಟೆ ಮತ್ತು ಬೇತಮಂಗಲ ನಡುವೆ 17.5 ಕಿ.ಮೀ ಗೆ ವಿಸ್ತರಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ವರ್ಷದ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ಎಕ್ಸ್‌ಪ್ರೆಸ್‌ವೇಯನ್ನು ತೆರೆಯುವ ಗುರಿ ಹೊಂದಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮುಂದಿನ ವರ್ಷವಷ್ಟೇ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. 260-ಕಿಮೀ ಸಂಪೂರ್ಣ ಸ್ಟ್ರೆಚ್ ಪೂರ್ಣಗೊಂಡು ಕಾರ್ಯಾಚರಣೆ ಆರಂಭವಾಗುವವರೆಗೆ ಮಾಲೂರು ಮತ್ತು ಬಂಗಾರಪೇಟೆಗೆ ತಲುಪಲು ಕರ್ನಾಟಕದ ಎಕ್ಸ್ ಪ್ರೆಸ್ ರಸ್ತೆ ಬಳಸಲು ಜನರಿಗೆ ಅನುಮತಿಸಲಾಗುವುದು” ಎಂದು ಬ್ರಹ್ಮಂಕರ್ ಹೇಳಿದರು.