ಭಾರತದ ಬೆಳವಣಿಗೆಯಲ್ಲಿ ಬೆಂಗಳೂರು ಮಹತ್ವದ ಪಾತ್ರ ವಹಿಸಿದೆ : ಜೈಶಂಕರ್

ಬೆಂಗಳೂರು:

    ಭಾರತವನ್ನು ಜಾಗತಿಕವಾಗಿ ಬೆಳೆಸಲು ಬೆಂಗಳೂರು ಹೆಚ್ಚಿನ ಕೊಡುಗೆ ನೀಡಿದ್ದು ಅದಕ್ಕೆ ಇದನ್ನು ಸಿಲಿಕಾನ್‌ ಸಿಟಿ ಎನ್ನುವುದು ಎಂದು  ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಹೇಳಿದ್ದಾರೆ .ನಗರದಲ್ಲಿ ನಿನ್ನೆ ನಡೆದ ಬಿಜೆವೈಎಂ ಯುವ ಸಂವಾದದಲ್ಲಿ ಜೈಶಂಕರ್ ಅವರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

    ಕರ್ನಾಟಕ ರಾಜ್ಯ ಮತ್ತು ಬೆಂಗಳೂರು ನಗರ ಎರಡೂ ಭಾರತದ ಬೆಳವಣಿಗೆಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿವೆ, ವಿಶೇಷವಾಗಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ. “ಭಾರತದ ಬಗ್ಗೆ ಜಗತ್ತು ಹೊಂದಿರುವ ಬಹಳಷ್ಟು ಅನಿಸಿಕೆಗಳು ಬೆಂಗಳೂರು ಮತ್ತು ಕರ್ನಾಟಕದಿಂದ ಬಂದಿವೆ ಎಂದು ಹೇಳಿದರ.

   ಜಾಗತಿಕವಾಗಿ ನಾವು ಇನ್ನು ಮುಂದೆ ವಿಚಾರಗಳನ್ನು ಸ್ವೀಕರಿಸುವವರಾಗಿರುವುದಿಲ್ಲ. ವಿಚಾರಗಳನ್ನು ನೀಡುವವರು ಒದಗಿಸುವವರು ಮತ್ತು ಪ್ರತಿಕ್ರಿಯಿಸುವವರಾಗಿ ಮಾರ್ಪಟ್ಟಿದ್ದೇವೆ, ವಿಶ್ವವು ಭಾರತವನ್ನು ಹೇಗೆ ನೋಡುತ್ತದೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap