ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ವಿದ್ಯಾರ್ಥಿಯ ಬರ್ಬರ ಹತ್ಯೆ !!

ಬೆಂಗಳೂರು: 

      ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಸಹಪಾಠಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ 8 ನೇ ಮೈಲಿಯ ಸೌಂದರ್ಯ ಕಾಲೇಜಿನಲ್ಲಿ ನಡೆದಿದೆ.

      ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಯಾಸಾಗರ್ (18) ಕೊಲೆಯಾದ ವ್ಯಕ್ತಿ. ಸಹಪಾಠಿ ರಕ್ಷಿತ್(18) ಎಂಬಾತ ಮತ್ತಿಬ್ಬರು ಹುಡುಗರ ಜೊತೆ ಸೇರಿ ದಯಾ ಸಾಗರ್ ನನ್ನು ಕೊಲೆಗೈದಿದ್ದಾರೆ.  ದಯಾಸಾಗರ್ ಹಾಗೂ ರಕ್ಷಿತ್ ಇಬ್ಬರು ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಸೌಂದರ್ಯ ಕಾಲೇಜಿನಲ್ಲಿ ಓದುತ್ತಿದ್ದರು. ದಯಾಸಾಗರ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದನು. ಈ ಬಗ್ಗೆ ರಕ್ಷಿತ್ ಹಲವು ಬಾರಿ ಗುಂಪು ಕಟ್ಟಿಕೊಂಡು ದಯಾಸಾಗರ್ ಗೆ ವಾರ್ನ್ ಕೂಡ ಮಾಡಿದ್ದನು. 

    ಆರೋಪಿ ರಕ್ಷಿತ್ ಕಾಲೇಜಿಗೆ ಬರುವಾಗಲೇ ತನ್ನ ಬ್ಯಾಗ್ ನಲ್ಲಿ ಚಾಕು ಇಟ್ಟುಕೊಂಡು ಬಂದಿದ್ದ ಎನ್ನಲಾಗಿದೆ. ಕಾಲೇಜಿನ ನಾಲ್ಕನೇ ಅಂತಸ್ತಿನ ಶೌಚಾಲಯದಲ್ಲಿ ರಕ್ಷಿತ್ ದಯಾ ಸಾಗರ್ ಗೆ ಇರಿದಿದ್ದಾನೆ. ತಕ್ಷಣವೇ ಸಹಪಾಠಿಗಳು ಹಾಗೂ ಅಧ್ಯಾಪಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ರಕ್ತಸ್ರಾವ ಉಂಟಾಗಿ ರಕ್ಷಿತ್ ಮೃತಪಟ್ಟಿದ್ದಾನೆ.

       ಅದೇ ಕಾಲೇಜಿನ ವಾಹನ ಚಾಲಕರ ಮಗ ಎನ್ನಲಾಗಿದೆ. ವಿದ್ಯಾರ್ಥಿಗಳ ಗಲಾಟೆಗೆ ತಕ್ಷಣ ಎಚ್ಚೆತ್ತ ಅಧ್ಯಾಪಕರು ಮೂವರು ಆರೋಪಿಗಳನ್ನು ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ