ಬೆಂಗಳೂರು :
ಮಾರ್ಚ್ 16 ಕರ್ನಾಟಕ ರೈಲ್ವೆ ಅಭಿವೃದ್ಧಿಯ ಐತಿಹಾಸಿಕ ದಿನವಾಗಲಿದೆ. ಯಾಕೆ ಅಂತೀರಾ ಸಂಪೂರ್ಣ ವರದಿ ಇಲ್ಲಿದೆ ಗಮನಿಸಿ.
ಹುಬ್ಬಳ್ಳಿ ದಕ್ಷಿಣ – ಸಂಶಿ ದ್ವಿಪಥ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಪರಿಶೀಲನೆ ಯನ್ನು ಸಹ ಮಾಡಲಾಗಿದೆ. ಇದು ಬೆಂಗಳೂರು-ಕುಡಚಿವರೆಗೂ ಸಂಪರ್ಕ ಕಲ್ಪಿಸುವ ದ್ವಿಪಥ ಹಳಿ ಕಾಮಗಾರಿಯಾಗಿದೆ. ಹಾಗೆಯೇ ಇದು 749 ಕಿಲೋ ಮೀಟರ್ ಇರುವ ದ್ವಿಪಥ ರೈಲ್ವೆ ಹಳಿಯಾಗಿದೆ. ಹಾಗೆಯೇ ಈ ಮಾರ್ಗವು ತುಮಕೂರು, ಅರಸೀಕೆರೆ, ಬಿರೂರು, ಚಿಕ್ಕಜಜೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಸಂಪರ್ಕ ಕಲ್ಪಿಸಲಿದೆ.
ಈ ರೈಲ್ವೆ ದ್ಪಿಪಥ ಮಾರ್ಗವು ಮಾರ್ಚ್ 16ರಂದು ಲೋಕಾರ್ಪಣೆ ಆಗಲಿದೆ. ಹಾಗೆಯೇ ಇದು ಹುಬ್ಬಳ್ಳಿ ಭಾಗ ಸೇರಿದಂತೆ ಇತರ ಜಿಲ್ಲೆಗಳ ಜನರಿಗೂ ತುಂಬಾ ಸಹಾಯಕವಾಗಲಿದೆ. ಈ ಲೋಕಾರ್ಪಣೆ ದಿನ ಕರ್ನಾಟಕ ರೈಲ್ವೆ ಅಭಿವೃದ್ಧಿಯ ಐತಿಹಾಸಿಕ ದಿನವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
