ದಹೆಲಿಯ ರೆಕಾರ್ಡ್‌ ಮುರಿಯಲು ಮುಂದಾದ ಬೆಂಗಳೂರು….!

ಬೆಂಗಳೂರು

    ಕೇಂದ್ರ ಸರ್ಕಾರವು ಹೊಸದಾಗಿ ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ ಬೆಂಗಳೂರಿಗೆ 7,000 ಎಲೆಕ್ಟ್ರಿಕ್ ಬಸ್‌ಗಳನ್ನು ಅನುಮೋದಿಸಿದೆ. ಇದರಿಂದಾಗಿ, ಬೆಂಗಳೂರು ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಖ್ಯೆಯಲ್ಲಿ ದೆಹಲಿಯನ್ನು ಮೀರಿಸುವ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ, ಬೆಂಗಳೂರಿಗೆ 7,000 ಇ-ಬಸ್‌ಗಳು ಸಿಗಲಿದ್ದು, ಹೈದರಾಬಾದ್‌ಗೆ 2,800 ಇ-ಬಸ್‌ಗಳು ಸಿಗಲಿವೆ ಎಂದು ವರದಿಯಾಗಿದೆ.

   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸುಮಾರು 1,300 ಎಸಿ ಅಲ್ಲದ ಇ-ವಾಹನಗಳು ಸೇರಿದಂತೆ 6,500 ಬಸ್‌ಗಳನ್ನು ಹೊಂದಿದೆ. ಶೀಘ್ರದಲ್ಲೇ 320 ಎಸಿ ಇ-ಬಸ್‌ಗಳನ್ನು ಗುತ್ತಿಗೆಗೆ ಪಡೆಯಲಿದೆ.

   ಸದ್ಯ, 8,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿರುವ ದೆಹಲಿಯು ದೇಶದ ಎಲ್ಲಾ ನಗರಗಳ ಪೈಕಿ ಅತಿ ಹೆಚ್ಚು ಸಾರ್ವಜನಿಕರ ಸಾರಿಗೆ ಬಸ್‌ಗಳನ್ನು ಹೊಂದಿದೆ. ಆದರೆ, ಬೆಂಗಳೂರಿಗೆ ಕೇಂದ್ರದಿಂದ ಬರಲಿರುವ ಬಸ್​ಗಳು ಹಾಗೂ ಬಿಎಂಟಿಸಿ ಖರೀದಿಸಲಿರುವ ಬಸ್​ಗಳ ಲೆಕ್ಕಾಚಾರ ಹಾಕಿದಾಗ, ಮುಂದಿನ 2-3 ವರ್ಷಗಳಲ್ಲಿ ದೆಹಲಿಯನ್ನು ಮೀರಿಸಲಿದೆ.

   ಬಿಎಂಟಿಸಿ ನಿಯಮಗಳ ಪ್ರಕಾರ, 11 ಲಕ್ಷ ಕಿಲೋಮೀಟರ್ ಸಂಚರಿಸಿದ ಅಥವಾ 15 ವರ್ಷ ಪೂರೈಸಿದ ಬಸ್ ಅನ್ನು ಸ್ಕ್ರಾಪ್ ಮಾಡಬೇಕು. ಬಿಎಂಟಿಸಿಯ ಸರಿಸುಮಾರು ಶೇ 10 ರಷ್ಟು ಬಸ್ಸುಗಳು ವಾರ್ಷಿಕವಾಗಿ ಸೇವೆಯಿಂದ ಬಿಡುಗಡೆ ಹೊಂದುತ್ತವೆ ಎಂದು ವರದಿ ಉಲ್ಲೇಖಿಸಿದೆ. ಮುಂದಿನ ಮೂರು ವರ್ಷಗಳಲ್ಲಿ, ಬಿಎಂಟಿಸಿಯ 2,000 ಬಸ್‌ಗಳು ಗುಜರಿಗೆ ಹೋದರೂ ಸಹ ಕೇಂದ್ರದಿಂದ ದೊರೆಯುವ 7000 ಬಸ್​​ಗಳು ಸೇರಿದರೆ ಒಟ್ಟು ಬಸ್​ಗಳ ಸಂಖ್ಯೆ 10,000 ದಾಟುತ್ತದೆ.
   ಬೃಹತ್ ಕೈಗಾರಿಕಾ ಸಚಿವಾಲಯವು 2024 ರ ಸೆಪ್ಟೆಂಬರ್ 29 ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಪಿಎಂ ಇ-ಡ್ರೈವ್ ಯೋಜನೆಯಡಿ 40 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಒಂಬತ್ತು ದೊಡ್ಡ ನಗರಗಳಲ್ಲಿ 14,028 ಇ-ಬಸ್‌ಗಳ ಖರೀದಿಗೆ 4,391 ಕೋಟಿ ರೂ. ಸಬ್ಸಿಡಿಗಳನ್ನು ಒದಗಿಸಬೇಕಿದೆ. 2025-26ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ 4,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು.

Recent Articles

spot_img

Related Stories

Share via
Copy link