ಬೆಂಗಳೂರು ವಿ ವಿ : ಬಸ್ ತಂಗುದಾಣವಿಲ್ಲದೆ ವಿದ್ಯಾರ್ಥಿಗಳ ಪರದಾಟ..!

ಬೆಂಗಳೂರು:

   ಜ್ಞಾನಭಾರತಿ ಕ್ಯಾಂಪಸ್‌ನಾದ್ಯಂತ ಬಸ್ ತಂಗುದಾಣಗಳಿಲ್ಲದ ಕಾರಣ ದೈನಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತೊಂದರೆ ಎದುರಿಸುತ್ತಿದ್ದಾರೆ.ಬಸ್ ತಂಗುದಾಣಗಳಿಲ್ಲದಿರುವುದು ಬೇಸಿಗೆ ಹಾಗೂ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಮಳೆ ಸಮಯದಲ್ಲಿ ಬಸ್ ಗಳಿಗೆ ಕಾದು ನಿಲ್ಲುವ ವಿದ್ಯಾರ್ಥಿಗಳು ನೆನೆಯುತ್ತಾರೆ. ನಂತರ ತರಗತಿಗಳಿಗೆ ಹೋಗುವಂತಾಗುತ್ತಿದೆ.

   ಬಿಎಂಟಿಸಿ ಜ್ಞಾನಭಾರತಿ ಮಾರ್ಗದಲ್ಲಿ ಬಸ್‌ ಸೇವೆಗಳನ್ನು ಒದಗಿಸುತ್ತಿದೆ. ಕ್ಯಾಂಪಸ್‌ನಿಂದ ನಗರಗ ಪ್ರಮುಖ ಕೇಂದ್ರಗಳಾದ ಕೆಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್, ಉಳ್ಳಾಲ, ಮಲ್ಲತ್ತಹಳ್ಳಿಯಂತಹ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದೆ.

   4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೈನಂದಿನ ಪ್ರಯಾಣಕ್ಕಾಗಿ BMTC ಬಸ್‌ಗಳನ್ನು ಅವಲಂಬಿಸಿದ್ದಾರೆ, ವಿಶ್ವವಿದ್ಯಾಲಯ ಮತ್ತು ಕ್ವಾರ್ಟರ್ಸ್‌ನ ಲ್ಲಿಎರಡು ಬಸ್ ಶೆಲ್ಟರ್‌ಗಳನ್ನು ಹೊರತುಪಡಿಸಿದರೆ, ಇನ್ನೆಲ್ಲೂ ಬಸ್ ತಂಗುದಾಣಗಳಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಗಳು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿ ನಾಯಕ ಜಿ ಲೋಕೇಶ್ ರಾಮ್ ಎಂಬುವವರು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಬಸ್‌ ನಿಲ್ದಾಣಗಳಿಲ್ಲದ ಕಾರಣ ದೈನಂದಿನ ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

   ಮಳೆಯ ಸಮಯದಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ಸಾಕಷ್ಟು ವಿದ್ಯಾರ್ಥಗಲು ತರಗತಿಗಳಿಗೆ ಹಾಜರಾಗದಂತಾಗುತ್ತಿದೆ. ಈ ಸಂಬಂಧ ವಿಶ್ವವಿದ್ಯಾನಿಲಯವು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಒತ್ತಾಯಿಸಿದ್ದಾರೆ.

   ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಜಯಕುಮಾರ್ ಪ್ರತಿಕ್ರಿಯಿಸಿ, ಸಮಸ್ಯೆ ಇರುವುದು ನಿಜ. ವಿಶ್ವವಿದ್ಯಾಲಯವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಸಮಸ್ಯೆಯನ್ನು ಪರಿಹರಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

   ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಾರಿಗೆ ಒದಗಿಸಲು ಕ್ಯಾಂಪಸ್‌ನೊಳಗೆ ಎಲೆಕ್ಟ್ರಿಕ್ ಬಸ್‌ಗಳ ಪರಿಚಯಿಸಲು ಚಿಂತನೆ ನಡೆಯುತ್ತಿದೆ. ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಾದ ತಂಗುತಾಣಗಳನ್ನು ಸ್ಥಾಪಿಸಲಿದೆ, ಕ್ಯಾಂಪಸ್‌ನಲ್ಲಿ ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಎಂದು ವಿಶ್ವವಿದ್ಯಾಲಯದ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

Recent Articles

spot_img

Related Stories

Share via
Copy link