ಮಾ. 24-26 : ನಮ್ಮ ಬೆಂಗಳೂರು ಹಬ್ಬ

ಬೆಂಗಳೂರು :

     ಬೆಂಗಳೂರಿನ ವಿವಿಧೆಡೆ ಇದೇ ಮಾರ್ಚ್ 24 ರಿಂದ 26 ರವರೆಗೆ ನಮ್ಮ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಅವರು ವಿಧಾನಸೌಧದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರ, ಬಿಬಿಎಂಪಿಯ ಎಲ್ಲಾ ವಾರ್ಡ್ಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಯೋಜಿಸಲು ತಯಾರಿ ನಡೆಸಲಾಗುತ್ತಿದೆ. ಇದರ ಉದ್ಘಾಟನೆಯು ಮಾರ್ಚ್ 24 ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ ನೆರವೇರಲಿದೆ ಈ ಹಬ್ಬದ ಪ್ರಯುಕ್ತ ಕಬ್ಬನ್‌ಪಾರ್ಕ್, ಚಿತ್ರಕಲಾ ಪರಿಷತ್ತು ಹೀಗೆ ವಿವಿದೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

     ಐಟಿ-ಬಿಟಿ ಸಂಸ್ಥೆಗಳಲ್ಲೂ ಇದರ ಸಂಭ್ರಮ ಕಾಣಬಹುದಾಗಿದೆ. ಕೆಲ ಹೋಟೆಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ತಿನಿಸುಗಳನ್ನು ಗ್ರಾಹಕರಿಗೆ ನೀಡಲು ತಿಳಿಸಲಾಗಿದೆ. ಅಲ್ಲದೇ ನಮ್ಮ ಬೆಂಗಳೂರು ಹಬ್ಬದ ಬ್ರಾಂಡ್ ದೋಸೆಯನ್ನು ಈ ಮೂರು ದಿನಗಳು ಹೋಟೆಲ್‌ಗಳಲ್ಲಿ ತಯಾರಿಸಲಾಗುವುದು ಎಂದು ತಿಳಿಸಿದರು.

    ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಆಹಾರೋತ್ಸವ, ಸಂಗೀತ ಸಂಜೆ, ಚಿತ್ರಕಲಾ, ಕರಕುಶಲ ಪ್ರದರ್ಶನ, ಬೈಕ್ ರ್ಯಾಲಿ, ಸಂಗೀತ ಸಂಜೆ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸಹ ಅನಾವರಣಗೊಳ್ಳಲಿದೆ.

    ಖ್ಯಾತ ಸಂಗೀತ ತಂಡಗಳಿಂದ ಕಛೇರಿ, ಕಲಾವಿದರಿಂದ ನೃತ್ಯ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ . ನಗರದ ಪ್ರಮುಖ ಮಾಲ್‌ಗಳಲ್ಲಿ ಸಹ ಈ ಹಬ್ಬದ ರಂಗು ಏರಲಿದೆ ಎಂದರು.ಸಭೆಯಲ್ಲಿ ಸಚಿವ ಮುನಿರತ್ನ, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap