ನೈಜೀರಿಯನ್ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ ಸಿಸಿಬಿ ವಶ!!

ಬೆಂಗಳೂರು :

      ಮಾದಕವಸ್ತುಗಳ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ನೈಜೀರಿಯಾ ಮೂಲದ ಇಬ್ಬರೂ ಡ್ರಗ್​ ಪೆಡ್ಲರ್​ಗಳನ್ನ ಬಂಧಿಸಿದ್ದಾರೆ.

     ಜಾನ್ ಇಗ್ವಾತೂ ಚಿನೆಡೂ(28) ಹಾಗೂ ವಿನ್ಸೆಂಟ್ ಇಜಿಮೊಫೋರಾ(37) ಬಂಧಿತ ಆರೋಪಿಗಳು. ಈ ಇಬ್ಬರೂ ವಿದೇಶಿ ಪ್ರಜೆಗಳು ವೀಸಾ ಅವಧಿ‌ ಮುಗಿದಿದ್ದರು, ಭಾರತದಲ್ಲಿ ಅಕ್ರಮವಾಗಿ‌ ನೆಲೆಸಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು.

     ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ ಎಕ್ಸ್ಟಸಿ ಹಾಗೂ ಕೊಕೇನ್​ ವಶಪಡಿಸಿಕೊಳ್ಳಲಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link