ಬಂಗಾರು ಹನುಮಂತುಗೆ ‘ಬೆಳ್ಳಿ ಸಿಂಹಾಸನ’ ಕಂಟಕ!

ಬಳ್ಳಾರಿ:

   ‘ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಮಠಾಧೀಶರಿಗೆ ನೀಡಿದ್ದ ಬೆಳ್ಳಿ ಸಿಂಹಾಸನಗಳನ್ನು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ (ಅಫಿಡವಿಟ್) ಉಲ್ಲೇಖಿಸಿಲ್ಲ’ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ .ದೂರು ಆಧರಿಸಿ ಸಂಡೂರು ಕ್ಷೇತ್ರದ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್.ಯೋಗೇಶ್ವರ್ ಅವರು, ‘ದೂರಿನಲ್ಲಿ ವ್ಯಕ್ತವಾದ ಅಂಶಗಳನ್ನು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದ್ದಾರೆ. 

   ‘ವಾಲ್ಮೀಕಿ ಮಠ ಮತ್ತು ಪಂಚಮ ಸಾಲಿ ಮಠಕ್ಕೆ ನೀಡಿದ ₹30 ಲಕ್ಷ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ಬಂಗಾರು ಹನುಮಂತ ಉಲ್ಲೇಖಿಸಿಲ್ಲ. ಅವರ ನಾಮಪತ್ರವನ್ನು ಅಸಿಂಧುಗೊಳಿಸಿ’ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿಯ ರಾಘವೇಂದ್ರ ಪೂಜಾರಿ ಎಂಬುವರು ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದ್ದರು.

   ‘2022/23/24ರಲ್ಲಿ ಅವರು ಹೊಂದಿದ್ದ ಆದಾಯಕ್ಕೂ ಮತ್ತು ಅವರು ಖರೀದಿಸಿದ ಜಮೀನುಗಳ ಮೌಲ್ಯಕ್ಕೂ ವ್ಯತ್ಯಾಸ ಕಾಣುತ್ತಿದೆ. ಅವರು ಹೇಳಿದ್ದು ಅಸತ್ಯ. 2022ರಲ್ಲಿ ₹26 ಲಕ್ಷದಷ್ಟು ಆದಾಯ ತೋರಿಸಿದ್ದ ಹನುಮಂತ, ಅದೇ ವರ್ಷ 23 ಎಕರೆ ಭೂಮಿ ಖರೀದಿಸಿದ್ದಾರೆ. ಇಲ್ಲಿ ಸತ್ಯ ಮರೆಮಾಚಿದಂತೆ ಕಾಣುತ್ತಿದೆ’ ಎಂದು ಅನುಮಾನ ವ್ಯಕ್ತಪಡಿಸಿದ್ದರು.

   ‘ಬಂಗಾರು ಹನುಮಂತ ಅವರು ₹2 ಕೋಟಿ ಮೌಲ್ಯದ ಚಿನ್ನ, 25 ಕೆಜಿ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ. ಆದರೆ, ಅವರ 5 ವರ್ಷಗಳ ಆದಾಯಕ್ಕೂ ಇದಕ್ಕೂ ತಾಳೆಯೇ ಆಗುತ್ತಿಲ್ಲ. ಇದು ಸುಳ್ಳು ಮಾಹಿತಿ. ಆದಾಯದ ಮೂಲ ಮರೆ ಮಾಚಲಾಗಿದೆ. ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆ ಇದರ ಮೂಲ ಪತ್ತೆ ಮಾಡಬೇಕು’ ಎಂದು ಅವರು ಕೋರಿದ್ದರು.

   ‘ಹಣಕಾಸಿನ ಅಕ್ರಮಗಳ ಬಗ್ಗೆ ಪ್ರಮಾಣಪತ್ರ ಹೇಳುತ್ತಿದೆ. ಬಹಿರಂಗ ಆಗದ ಆದಾಯ ಮತ್ತು ಇತರ ಮೂಲಗಳನ್ನು ಪ್ರತಿಬಿಂಬಿಸುತ್ತಿದೆ. ಅಭ್ಯರ್ಥಿಯ ಆದಾಯ ಮತ್ತು ವೆಚ್ಚದ ಮೂಲ ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ’ ಎಂದು ದೂರಿನಲ್ಲಿ ತಿಳಿಸಿದ್ದರು.ಬಂಗಾರು ಹನುಮಂತ ಅವರ ಪತ್ನಿಗೆ ₹1.6 ಕೋಟಿ ಸಾಲ ಸಿಕ್ಕಿರುವುದಾಗಿ ತೋರಿಸಲಾಗಿದೆ. ಆದರೆ, ಅವರಿಗೆ ಆದಾಯದ ಮೂಲವೇ ಇಲ್ಲ ಎಂದೂ ಪತ್ರದಲ್ಲಿ ರಾಘವೇಂದ್ರ ಪೂಜಾರಿ ಉಲ್ಲೇಖಿಸಿದ್ದರು.

   ರಾಘವೇಂದ್ರ ಪೂಜಾರಿ ದೂರುದಾರಬಂಗಾರು ಹನುಮಂತ ಅವರು ಬೆಳ್ಳಿಯನ್ನು ದೇಣಿಗೆಯಾಗಿ ಕೊಡಲಿ. ಅದನ್ನು ಘೋಷಿಸಿ ಅದರ ಮೂಲ ತಿಳಿಸಬೇಕಲ್ಲವೇ? ಆ ವಿವರ ದಾಖಲಾಗಬೇಕು. ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿಬಂಗಾರು ಹನುಮಂತ ಬಿಜೆಪಿ ಅಭ್ಯರ್ಥಿ ಸಂಡೂರುಳ್ಳಿ ಕೊಟ್ಟಿದ್ದು ನಾನಲ್ಲ ಅಭಿಮಾನಿಗಳು. ಆ ಕಾರ್ಯಕ್ರಮಗಳಲ್ಲಿ ನಾನೂ ಭಾಗವಹಿಸಿದ್ದೆ ಅಷ್ಟೇ. ಚುನಾವಣೆ ಹೊತ್ತಲ್ಲಿ ಇಂಥ ಆರೋಪ ಮಾಡುವವರನ್ನು ದೇವರೇ ನೋಡಿಕೊಳ್ಳಲಿ.

   ಹರಿಹರದ ವೀರಶೈವ ಲಿಂಗಾಯತ ಪಂಚಸಾಲಿ ಜಗದ್ಗುರು ಪೀಠದಲ್ಲಿ 2023ರ ಜನವರಿ 17ರಂದು ನಡೆದ ಹರ ಜಾತ್ರೆಯಲ್ಲಿ ಬಂಗಾರು ಹನುಮಂತು ಪೀಠಕ್ಕೆ 24 ಕೆಜಿ ತೂಕದ ಬೆಳ್ಳಿ ಸಿಂಹಾಸನ ಸಮರ್ಪಿಸಿದ್ದರು. ಇದರ ಜತೆಗೆ 2023ರ ಫೆಬ್ರುವರಿ 8 ಮತ್ತು 9ರಂದು ರಾಜನಹಳ್ಳಿ ಗುರುಪೀಠದಲ್ಲಿ ಜರುಗಿದ್ದ ವಾಲ್ಮೀಕಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಠಕ್ಕೆ ಬೆಳ್ಳಿಯ ಸಿಂಹಾಸನ ನೀಡಿದ್ದರು ಎನ್ನಲಾಗಿದೆ. ಈ ಕುರಿತ ಪತ್ರಿಕೆಗಳಲ್ಲಿ ವರದಿಗಳೂ ಪ್ರಕಟವಾಗಿವೆ. ಬಂಗಾರು ಹನುಮಂತ ಅವರ ಅಭಿಮಾನಿಗಳ ಫೇಸ್ಬುಕ್ ಪುಟಗಳಲ್ಲಿಯೂ ಈ ವಿಡಿಯೊಗಳಿವೆ. ಇದೇ ವರದಿಗಳು ಕಾರ್ಯಕ್ರಮದ ವಿಡಿಯೊಗಳನ್ನು ತಮ್ಮ ದೂರಿಗೆ ಪೂರಕ ದಾಖಲೆಗಳಾಗಿ ರಾಘವೇಂದ್ರ ಆಯೋಗಕ್ಕೆ ನೀಡಿದ್ದರು.

    ರಾಜೇಶ್ ಎಚ್.ಡಿ ಚುನಾವಣಾಧಿಕಾರಿ ಸಂಡೂರುಪ್ರಮಾಣ ಪತ್ರದಲ್ಲಿನ ಮಾಹಿತಿ ಪರಿಶೀಲಿಸುವ ಅಧಿಕಾರ ಚುನಾವಣಾಧಿಕಾರಿಗೆ ಇರುವುದಿಲ್ಲ. ಈ ಸಂಬಂಧ ದೂರುದಾರರು ಕೋರ್ಟ್ಗೆ ಹೋಗಬಹುದು. ಇದನ್ನೇ ಚುನಾವಣಾ ಆಯೋಗಕ್ಕೂ ತಿಳಿಸಲಾಗುವುದು.

Recent Articles

spot_img

Related Stories

Share via
Copy link
Powered by Social Snap