ನಾನೊಬ್ಬ ಭಾರತೀಯ ಎಂಬುದನ್ನು ಮರೆ ಮಾಚಿದೆ; ಬಾಂಗ್ಲಾದಿಂದ ತಪ್ಪಿಸಿಕೊಂಡವರು ಹೇಳಿದ್ದೇನು?

ಬಾಂಗ್ಲಾದೇಶ

    ಭಾರತ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಢಾಕಾದಿಂದ ಪಾರಾಗಿ ಬಂದಿರು ಸಂಗೀತಗಾರರೊಬ್ಬರು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಕೋಲ್ಕತ್ತಾ ಮೂಲದ ಸರೋದ್ ವಾದಕರೊಬ್ಬರು ಭಾಗವಹಿಸಬೇಕಾಗಿದ್ದ ಢಾಕಾದ ಪ್ರಮುಖ ಸಾಂಸ್ಕೃತಿಕ ವೇದಿಕೆಯನ್ನು ಧ್ವಂಸಗೊಳಿಸಿಲಾಗಿತ್ತು. ಡಿಸೆಂಬರ್ 19 ರಂದು ಛಾಯನೌತ್‌ನಲ್ಲಿ ಪ್ರದರ್ಶನ ನೀಡಬೇಕಿದ್ದ ಶಿರಾಜ್ ಅಲಿ ಖಾನ್, ದಾಳಿಯು ತಮ್ಮನ್ನು ನಡುಗಿಸಿದೆ ಮತ್ತು ತಮ್ಮ ಭೇಟಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

    ಕಳೆದ ವರ್ಷದ ಹಸೀನಾ ವಿರೋಧಿ ಪ್ರತಿಭಟನೆಗಳಿಗೆ ಕಾರಣರಾದ ತೀವ್ರಗಾಮಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ರಾಷ್ಟ್ರವ್ಯಾಪಿ ಅಶಾಂತಿ ಉಂಟಾದ ಮಧ್ಯೆ ಈ ಘಟನೆ ನಡೆದಿದೆ. ಶನಿವಾರ ಸಂಜೆ ಶಿರಾಜ್ ಕೋಲ್ಕತ್ತಾಗೆ ಜೀವಂತವಾಗಿ ಮರಳಿದ್ದನ್ನು ನೆನಪಿಸಿಕೊಂಡು ಭಾವುಕರಾದರು. ಆದರೂ ತಮ್ಮ ಟೀಂನ ತಬಲಾ ವಾದಕ ಬಾಂಗ್ಲಾದಲ್ಲಿಯೇ ಸಿಲುಕಿಕೊಂಡಿದ್ದರು ಎಂದು ಅವರು ಹೇಳಿದರು. ಹೆಚ್ಚುತ್ತಿರುವ ಭಾರತ ವಿರೋಧಿ ಭಾವನೆಯಿಂದಾಗಿ ಬಾಂಗ್ಲಾದೇಶವನ್ನು ತೊರೆಯುವಾಗ ತನ್ನ ಭಾರತೀಯ ಗುರುತನ್ನು ತಾನು ಮರೆ ಮಾಚುತ್ತಿದ್ದಾಗಿ ಹೇಳಿದರು.

   ಢಾಕಾದಿಂದ ಹೊರಡುವಾಗ ತನ್ನನ್ನು ಚೆಕ್‌ಪಾಯಿಂಟ್‌ನಲ್ಲಿ ತಡೆದು ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಲಾಯಿತು. ಸುರಕ್ಷತೆಯ ನಾನು ಭಾರತೀಯನೆಂಬುದನ್ನು ಹೇಳಲಿಲ್ಲ. ಯಿಯಿಂದ ಕಲಿತ ಬ್ರಹ್ಮನ್‌ಬರಿಯಾ ಉಪಭಾಷೆಯಲ್ಲಿ ಮಾತನಾಡಿದೆ. ಅದು ನನ್ನ ಪ್ರಾಣವನ್ನು ಉಳಿಸಲು ಸಹಾಯ ಮಾಡಿತು. ವಿಮಾನ ನಿಲ್ದಾಣ ತಲುಪುವವರಿಗೂ ಪಾಸ್‌ಪೋರ್ಟ್‌ ಮರೆಮಾಚಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

   ಬಾಂಗ್ಲಾದೇಶದ ಬೆನಪೋಲ್‌ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾಕಾರರು ಗಡಿ ಭಾಗಕ್ಕೆ ನುಗ್ಗುತ್ತಿರುವುದರಿಂದ, ಸೇನೆ ಹೈಲ ಅಲರ್ಟ್‌ ಘೋಷಣೆ ಮಾಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಢಾಕಾದ ಟೋಪ್ಖಾನಾ ರಸ್ತೆಯಲ್ಲಿರುವ ಶಿಲ್ಪಿ ಗೋಷ್ಠಿ ಸಾಂಸ್ಕೃತಿಕ ಕೇಂದ್ರವನ್ನು ಸುತ್ತುವರೆದಿದ್ದ ಪ್ರತಿಭಟನಾಕಾರರು, ಕಟ್ಟಡವನ್ನು ಧ್ವಂಸಗೊಳಿಸುವ ವಿಫಲ ಪ್ರಯತ್ನ ನಡೆಸಿದ್ದಾರೆ.

Recent Articles

spot_img

Related Stories

Share via
Copy link