ಚಾಕು ತೋರಿಸಿ ಚಿನ್ನದ ಸರ ಕಸಿದ ಕದೀಮ!!

ಬೆಂಗಳೂರು:

   ಊರಿಗೆ ಹೋಗಲು ಆಟೋಗಾಗಿ ಕಾಯುತ್ತಿದ್ದ ಮೂವರು ಮಹಿಳೆಯರಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ದುರ್ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

  ಹೆಬ್ಬಾಳದ ಮನೋರಾಯನ ಪಾಳ್ಯದ ಶಂಕರಿ, ಧಮಯಂತಿ ಹಾಗೂ ಯಶೋದಮ್ಮ ಅವರು ಬೆಳಿಗ್ಗೆ 6ರ ವೇಳೆ ವೇಲೂರಿಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣಕ್ಕೆ ತೆರಳಲು ಆಟೋಗಾಗಿ ಕಾಯುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿದ್ದಾರೆ.

ಭಯಗೊಂಡ ಶಂಕರಿ ಅವರ ಕತ್ತಿನಲ್ಲಿದ್ದ 24 ಗ್ರಾಂ ತೂಕದ ಚಿನ್ನದ ಸರವನ್ನು ಬಿಚ್ಚಿಕೊಂಡಿದ್ದು,ಉಳಿದ ಮಹಿಳೆಯರು ರಕ್ಷಣೆಗಾಗಿ ಕೂಗಾಡಿದ್ದರಿಂದ ಕ್ಷಣಾರ್ಧದಲ್ಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿದ್ದ ದುಷ್ಕರ್ಮಿಗಳು, ಈ ಕೃತ್ಯವೆಸಗಿದ್ದು, ಪ್ರಕರಣ ದಾಖಲಿಸಿರುವ ಹೆಬ್ಬಾಳ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ