
ಬೆಂಗಳೂರು: ಗುರುತು ಪರಿಚಯ ಇರುವವರನ್ನೇ ಈ ಕಾಲದಲ್ಲಿ ನಂಬೋದು ಕಷ್ಟ? ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದರನ್ನು ನಂಬೋದಾದರೂ ಹೇಗೆ? ವಂಚಕನ ನಯನವಾದ ಮಾತಿಗೆ ಮರುಳಾಗಿ ಶಿಕ್ಷಕಿಯೊಬ್ಬರು ಭಾರಿ ಎಡವಟ್ಟು ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಅಷ್ಟಕ್ಕೂ ನಡೆದಿದ್ದಾದರೂ ಏನು?: ಆಂಧ್ರದ ಪುಟ್ಟಪರ್ತಿಯ ಕಾಮುಕ ಯುವಕನೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಶಿಕ್ಷಕಿಯೊಬ್ಬರನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡು ವಿಚಿತ್ರವಾದ ಬೇಡಿಕೆ ಇಟ್ಟಿದ್ದು, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ಎಲೆಕ್ಟಾçನಿಕ್ ಸಿಟಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಆಂಧ್ರ ಮೂಲದ ಯುವತಿಯೊಬ್ಬರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಯುವಕ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಸ್ನೇಹ ಬೆಳೆದಿದೆ. ಶಿಕ್ಷಕಿಗೆ ಸಂದೇಶ ಕಳುಹಿಸಿ ಭಾವನಾತ್ಮಕವಾಗಿ ಮಾತನಾಡಿದ್ದಾನೆ. ನನಗೆ ಕ್ಯಾನ್ಸರ್ ಇದೆ ಹೆಚ್ಚು ದಿನ ಬದುಕೋದಿಲ್ಲ ಎಂದು ಕತೆ ಕಟ್ಟಿದ್ದಾನೆ. ಸಾಯೋದ್ರಳಗೆ ನಿಮ್ಮೊಂದಿಗೆ ದೈಹಿಕ ಸಂಪರ್ಕ ಬೆಳೆಸಬೇಕು ಎಂದು ಕೋರಿಕೊಂಡಿದ್ದಾನೆ.
ಇದಕ್ಕೆ ಶಿಕ್ಷಕಿ ನಿರಾಕರಿಸಿದ್ದಾಳೆ. ಕೊನೆ ಪಕ್ಷ ನಿನ್ನ ಬೆತ್ತಲೆ ವೀಡಿಯೋವಾದರೂ ಕಳುಹಿಸು ಎಂದು ಕೇಳಿಕೊಂಡಿದ್ದಾನೆ. ವಂಚಕನ ಮಾತಿಗೆ ಮರುಳಾಗಿ ಶಿಕ್ಷಕಿ ವೀಡಿಯೋ ಕಳುಹಿಸಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಯುವಕ ನಾನು ಕೇಳಿದಷ್ಟು ಹಣ ಕೊಡು, ನೇರವಾಗಿ ಸಿಗು, ನನ್ನ ಬಯಕೆ ಪೂರೈಸು ಇಲ್ಲವಾದಲ್ಲಿ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಕೊನೆಗೆ ದಿಕ್ಕು ತೋಚದ ಶಿಕ್ಷಕಿ ಎಲೆಕ್ಟಾçನಿಕ್ ಸಿಟಿ ಪೊಲೀಸ್ ಠಾಣೆಯ ಕದ ತಟ್ಟಿದ್ದು, ಯುವಕನಿಗೆ ನೀನು ಬೆಂಗಳೂರಿಗೆ ಬಾ, ನಿನ್ನ ಆಸೆ ಈಡೇರಿಸುತ್ತೇನೆ ಎಂದು ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದ ಯುವಕನನ್ನು ಪೊಲೀಸರು ಬಂಧಿಸಲು ಮುಂದಾದಾಗ ಯುವಕ ಮತ್ತೊಂದು ವರಸೆ ತೆಗೆದು, ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ. ಎಲೆಕ್ಟಾçನಿಕ್ ಸಿಟಿ ಪೊಲೀಸರು ಸಮಯಪ್ರಜ್ಞೆಯಿಂದ ಆತನನ್ನು ಬಂಧಿಸಿದ್ದಾರೆ. ಅದೇನೇ ಇರಲಿ, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಜೊತೆ ಚಾಟಿಂಗ್, ಸ್ನೇಹ ಮಾಡುವಾಗ ಎಚ್ಚರ ವಹಿಸಿ. ಇಲ್ಲವಾದಲ್ಲಿ ಪೇಚಿಗೆ ಸಿಲುಕಬೇಕಾಗುತ್ತದೆ ಜೋಕೆ..!








