ಗ್ರಾಹಕರಿಗೆ ಸಹಕರಿಸದ ಬ್ಯಾಂಕ್ ಸಿಬ್ಬಂದಿ

ಗುಬ್ಬಿ:

ಗುಬ್ಬಿ ಶಾಖೆಯ ಕೆನರಾ ಬ್ಯಾಂಕ್‍ನಲ್ಲಿ ಸರಿಯಾದ ಸಮಯದಲ್ಲಿ ಸೇವೆ ಸಿಗುತ್ತಿಲ್ಲ ಎಂದು ಬ್ಯಾಂಕ್‍ನ ಗ್ರಾಹಕರು ಆರೋಪಿಸಿದ್ದಾರೆ.ಭಾಷೆ ಬರದ ಸಿಬ್ಬಂದಿಯನ್ನು ಇಲ್ಲಿನ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿದ್ದು, ವರ್ತಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಸಿಬ್ಬಂದಿಯ ಜೊತೆ ದಿನ ನಿತ್ಯ ಜಗಳವಾಡಿಕೊಂಡು ಹೋಗುತ್ತಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 30 ಲಕ್ಷ ರೂ. ಹಣ ಠೇವಣಿ ಇಡಲು ಬಂದಿದ್ದ ಗ್ರಾಹಕರೊಬ್ಬರನ್ನು ಒಂದುವರೆ ಗಂಟೆಗೂ ಹೆಚ್ಚುಕಾಲ ನಿಲ್ಲಿಸಿಕೊಂಡು ಸಮಯ ಮುಗಿದ ಮೇಲೆ ಹಣ ಕಟ್ಟಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಆಗ ಠೇವಣಿ ಹಣ ಇಡಲು ಬಂದಿದ್ದ ಗ್ರಾಹಕರಿಗೂ ಬ್ಯಾಂಕ್ ಸಿಬ್ಬಂದಿಗೂ ಜಗಳವಾಯಿತು.

ಯಾವಾಗ ಬ್ಯಾಂಕ್‍ನಲ್ಲಿದ್ದ ಗ್ರಾಹಕರು ತಮಗೂ ಈ ಹಿಂದೆ ಬ್ಯಾಂಕ್ ಸಿಬ್ಬಂದಿಯಿಂದ ಆದ ಅನಾನುಕೂಲಗಳ ಬಗ್ಗೆ ಸಿಡಿದೆದ್ದು, ಸದರಿ ಅಧಿಕ ಮೊತ್ತದ ಹಣ ಠೇವಣಿ ಇಡಲು ಬಂದಿದ್ದ ಗ್ರಾಹಕನ ಪರವಾಗಿ ಒಕ್ಕೊರಲಿನಿಂದ ನಿಂತರು. ಆಗ ಬ್ಯಾಂಕ್ ಸಿಬ್ಬಂದಿ ಅಂತಿಮವಾಗಿ ಗ್ರಾಹಕನ ಹಣ ಕಟ್ಟಿಸಿಕೊಂಡು ಜನರ ಕೆಂಗಣ್ಣಿನಿಂದ ಪಾರಾಗಿದ್ದಾರೆ. ಇನ್ನಾದರೂ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿ, ಸಾರ್ವಜನಿಕರ ಸೇವೆಗೆ ಮುಂದಾಗಲಿ ಎಂದು ಜನರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link