ಮುಖಕ್ಕೆ ಟವೆಲ್ ಸುತ್ತಿದ ರೈತನಿಗೆ ದಂಡವಿಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ!!

 ಬರಗೂರು :

      ಗ್ರಾಮೀಣ ರೈತನೋರ್ವ ಮುಖಕ್ಕೆ ಟವೆಲ್ ಸುತ್ತಿಕೊಂಡು ಸಂಚರಿಸಿದರೂ ಮಾಸ್ಕ್ ಹಾಕಿಲ್ಲವೆಂದು ಬಲವಂತವಾಗಿ 100ರೂ.ದಂಡ ವಿಧಿಸಿ ನಕಲಿ ರಸೀದಿ ಕೊಟ್ಟು ಅಮಾನವೀಯ ರೀತಿಯಲ್ಲಿ ನಡೆದುಕೊಂಡ ಶಿರಾ ನಗರ ಸಭೆಯ ಅಧಿಕಾರಿಗಳ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

      ಇತ್ತೀಚೆಗೆ ನಡೆದ ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೇಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ನಡೆಸಿದಂತಹ ಸಮಾವೇಶಗಳು ಮತ್ತು ರೋಡ್ ಶೋ ರ್ಯಾಲಿ ವೇಳೆ ಸುಮಾರು 40ಸಾವಿರಕ್ಕೂ ಹೆಚ್ಚು ಮಂದಿ ಜನರು ಪಾಲ್ಗೊಂಡಿದ್ದರು.ಅವರಲ್ಲಿ ಸಾಕಷ್ಟು ಮಂದಿ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಸುದ್ದಿಗಳು ಮಾದ್ಯಮಗಳಲ್ಲಿ ಹರಿದಾಡಿದ್ದನ್ನು ಗಮನಿಸಿದ್ದೇವೆ. ಈ ಬಗ್ಗೆ ನಗರ ಸಭೆಯಾಗಲೀ, ಸಂಬಂದಪಟ್ಟ ಸರ್ಕಾರಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ.

      ಆದರೆ ಚುನಾವಣೆ ನಂತರದ ದಿನಗಳಲ್ಲಿ ಶಿರಾ ತಾಲೂಕಿನ ಅಗ್ರಹಾರದ ಗ್ರಾಮೀಣ ರೈತನೋರ್ವ ಬೈಕ್‍ನಲ್ಲಿ ಶಿರಾ ನಗರಕ್ಕೆ ತೆರಳಿದ ವೇಳೆ ಮುಖಕ್ಕೆ ಟವೆಲ್ ಸುತ್ತಿಕೊಂಡು ಪ್ರಯಾಣಿಸುತ್ತಿದ್ದರೂ ಸಹ ಶಿರಾ ನಗರ ಸಭೆ ಅಧಿಕಾರಿಗಳು ದಯೆ ದಾಕ್ಷಿಣ್ಯ ತೋರದೆ ಅನಧಿಕೃತವಾದ ರಶೀಧಿ ನೀಡಿ ದಂಡ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುವಂತೆ ಮಾಡಿದೆ.

      ಪಟ್ಟಣ ಪ್ರದೇಶದ ಪ್ಯಾಂಟ್ ಧರಿಸಿದ ಹಲವಾರು ಮಂದಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದರೂ ನಗರ ಸಭೆ ಅಧಿಕಾರಿಗಳಿಗೆ ಕಂಡದ್ದು ನಾನೇನಾ ಎಂಬ ಪ್ರಶ್ನೆಯನ್ನು ಪತ್ರಕರ್ತರ ಸಮ್ಮುಖದಲ್ಲಿ ತನ್ನ ಅಳಲನ್ನು ತೋಡಿಕೊಂಡ ಅಗ್ರಹಾರ ರಾಜಣ್ಣ ದಂಡ ಹಾಕಿದ ವೇಳೆ ನನ್ನ ಹತ್ತಿರ ಹಣ ಇರಲಿಲ್ಲ. ಪರಿಪರಿಯಾಗಿ ಬೇಡಿಕೊಂಡರೂ ಒಪ್ಪಲಿಲ್ಲ. ಪರಿಚಯಸ್ತರ ಹತ್ತಿರ ಹಣ ಪಡೆದು ದಂಡಟ್ಟಿದ್ದೇನೆ ಎಂದು ದೂರಿದ್ದಾರೆ.
ಮಾನ್ಯ ನರೇಂದ್ರ ಮೋದಿಯವರು ಮಾಸ್ಕ್ ಧರಿಸದೆ ಅವರೂ ಕೂಡ ಶ್ಯಾಲು ಮುಖಕ್ಕೆ ಹಾಕೊಕೊಂಡು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನನಗೆ ದಂಡ ಹಾಕಿದಂತೆ ಮೋದಿಯವರಿಗೂ ದಂಡ ಹಾಕುವ ಶಕ್ತಿ ನಗರ ಸಭೆಯಂದಹ ಅಧಿಕಾರಿಗಳಿಗೆ ಇದೆಯೇ.ನನಗೆ ಆದಂತಹ ಈ ದುರ್ಗತಿ ಯಾರಿಗೂ ಬರಬಾರದು. ಅಧಿಕಾರಿಗಳು ನ್ಯಾಯಯುತವಾಗಿ ಕೊರೋನಾ ಎದುರಿಸುವ ಪ್ರಯತ್ಮ ಮಾಡಿದಾಗ ಕೊರೋನಾ ರೋಗವನ್ನು ಬೇಗನೆ ಕಿತ್ತೊಗೆಯಬಹುದು ಎಂಬ ಮಾತುಗಳು ರೈತರಿಂದ ವ್ಯಕ್ತವಾಗುತ್ತಿರುವುದು ನಿಜಕ್ಕೂ ಅಮಾನವೀಯ ಸಂಗತಿ.

– ಅಗ್ರಹಾರ ರೈತ ರಾಜಣ್ಣ

ಅನಧಿಕೃತ ರಸೀದಿ : 

      ನಗರ ಸಭೆ ಅಧಿಕಾರಿಗಳು ದಂಡ ಹಾಕಿ ನೀಡಿರುವ ರಶೀದಿ ಜೆರಾಕ್ಸ್ ಪ್ರತಿಯಾಗಿದ್ದು ಯಾವುದೇ ಅಧಿಕೃತವಾದ ರಸೀದಿ ಅಲ್ಲ. ರಸೀದಿಯಲ್ಲಿ ಸೀಲು ಇಲ್ಲದೆ, ಕೇವಲ ಯಾರೋ ಅಧಿಕಾರಿಯ ರುಜು ಮಾಡಲಾಗಿದೆ. ರಸೀದಿಯಲ್ಲಿನ ಕ್ರಮ ಸಂಖ್ಯೆ 17 ಎಂದು ಕೈ ಬರವಣಿಗೆಯಲ್ಲಿ ಬರೆಯಲಾಗಿದೆ. ಕೊರೋನಾ ಪ್ರಾರಂಭವಾಗಿ ಎಷ್ಟು ತಿಂಗಳುಗಳಾಗಿದ್ದು ಎಷ್ಟೋ ಮಂದಿಗೆ ದಂಡ ವಿಧಿಸಿದ್ದಾರೆ.ಉಪ ಚುನಾವಣಾ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು ಮಾಸ್ಕ್ ಇಲ್ಲವೆಂಬ ಕಾರಣಕ್ಕೆ ಅದೆಷ್ಟೋ ಮಂದಿಗೆ ದಂಡ ವಿಧಿಸಿದ್ದಾರೆ. ಇದುವರೆಗೂ ದಂಡ ವಿಧಿಸಿರುವುದು 17 ಜನಕ್ಕೆ ಮಾತ್ರಾನಾ ಎಂಬ ಪ್ರಶ್ನೆಯಾಗಿದೆ.ಆದರೆ ರೈತನೋರ್ವ ಟವೆಲ್ ಸುತ್ತಿಕೊಂಡಿದ್ದರೂ ದಂಡ ವಿಧಿಸಿ ಕ್ರಮ ಸಂಖ್ಯೆ 17 ಎಂದು ನಮೂದಾಗಿರುವ ರಶಿದಿಯನ್ನು ಕೊಟ್ಟು ರೈತರನ್ನು ವಂಚಿಸುತ್ತಿರುವ ನಗರ ಸಭೆಯ ಅಧಿಕಾರಿಗಳನ್ನು ಸಂಬಂಧಪಟ್ಟ ಜನಪ್ರತಿನಿದಿಗಳು,ಸರ್ಕಾರಗಳು ಪ್ರಶ್ನಿಸಿದಾಗ ಮಾತ್ರ ರೈತರಿಗೆ ನ್ಯಾಯ ದೊರೆಯುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap