ಯಾದಲಡಕು ಕೆರೆ ಏರಿ ಹೊಡೆದು ನೀರು ಪೋಲು

 ಬರಗೂರು : 

     ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಶಿರಾ ತಾಲ್ಲೂಕಿನ ಯಾದಲಡುಕು ಗ್ರಾಮದ ಕೆರೆ ತುಂಬಿ ಕೋಡಿಯಲ್ಲಿ ನೀರು ಹೊರ ಹರಿಯುವ ಜೊತೆಗೆ, ಕೆರೆ ಏರಿ ಹೊಡೆದು ನೀರು ಪೋಲಾಗುತ್ತಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ತುರ್ತಾಗಿ ಕೆರೆ ಏರಿ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್‍ಎಂ.ಗೌಡ ಹೇಳಿದರು.

     ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಯಾದಲಡುಕು ಗ್ರಾಮದ ಕೆರೆ ತುಂಬಿ, ಅದರ ಏರಿ ಹೊಡೆದು ಹೋಗಿ ನೀರು ಪೋಲಾಗುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಯಾದಲಡುಕು ಗ್ರಾಮದ ಕೆರೆ ಮೇಲ್ನೋಟಕ್ಕೆ ಹೊಸದಾಗಿದ್ದರೂ ಕೆರೆ ಕೋಡಿ ಪಕ್ಕದಲ್ಲಿ ಚಿಕ್ಕದಾಗಿ ಒಂದು ಮಂಗೆ (ರಂಧ್ರ-ಬಿರುಕು) ಬಿದ್ದು ಮಣ್ಣು ಮುಚ್ಚಿಕೊಂಡಿತ್ತು ಎನ್ನಲಾಗಿದೆ.

     ಸೋಮವಾರ ರಾತ್ರಿ ಅನಿರೀಕ್ಷಿತವಾಗಿ ಸುರಿದ ಮಳೆಗೆ ಕೆರೆಯು ಭರ್ತಿಯಾಗಿ ನೀರಿನ ಒತ್ತಡದಿಂದ ಕೆರೆ ಏರಿ ಹೊಡೆದು ನೀರು ಪೋಲಾಗುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ನನ್ನ ಗಮನಕ್ಕೆ ತಂದರು. ಕೂಡಲೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಕೆರೆ ಏರಿ ಸುರಕ್ಷತೆ ಬಗ್ಗೆ ಎಚ್ಚರ ವಹಿಸಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ