ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಬರ್ಬರ ಹತ್ಯೆ

ಇಸ್ಲಾಮಾಬಾದ್:

  ಇಸ್ಲಾಮಾಬಾದ್,ಮಾ.22- ಅಪಹರಣದ ಯತ್ನದ ವೇಳೆ ಹಿಂದೂ ಯುವತಿಯೊಬ್ಬಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು, 18 ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿದ ಘಟನೆ ವಿಫಲಗೊಂಡು ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಪೂಜಾ ವೋಡ್ ಹತ್ಯೆಗೀಡಾಗಿರುವ ಯುವತಿ. ತನ್ನನ್ನು ಅಪಹರಿಸಲು ಬಂದ ದಾಳಿಕೋರರಿಗೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಆಕೆಯನ್ನು ಗುಂಡಿಕ್ಕಿ ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ.

ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾದ ಸೆಮಿ ಆಸೆ ಜೀವಂತ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮಹಿಳೆಯರನ್ನು ಸಿಂಧ್ ಪ್ರಾಂತ್ಯದಲ್ಲಿ ಅಪಹರಿಸಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದ್ದು, ಬಲವಂತವಾಗಿ ಅಂತಧರ್ಮೀಯ ವಿವಾಹಗಳನ್ನು ಕೂಡ ಮಾಡಲಾಗುತ್ತಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link