ನವೆಂಬರ್‍ನಲ್ಲಿ ಮದಲೂರು ಕೆರೆಗೆ ಹೇಮೆ ನೀರು

ಬರಗೂರು : 

      ಗ್ರಾಮೀಣ ಪ್ರದೇಶದ ಹಲವಾರು ಗ್ರಾಮಗಳ ಕುಡಿಯುವ ನೀರಿನ ಬವಣೆ ನಿಗಿಸುವಂತಹ ಸಾಮಥ್ರ್ಯ ಹೊಂದಿರುವ ಮದಲೂರು ಕೆರೆ ಶಿರಾ ತಾಲ್ಲೂಕಿಗೆ ವರದಾನವಾಗಿದೆ. ಈ ಕೆರೆಗೆ ಹೇಮಾವತಿ ನೀರು ಹರಿಸಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದ ಪರಿಣಾಮ, ನವೆಂಬರ್‍ನಲ್ಲಿ ನೀರು ಬಿಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

      ಅವರು ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕುರುಬರಾಮನಹಳ್ಳಿ ಗ್ರಾಮದಲ್ಲಿ ಶ್ರೀ ಅಮ್ಮಾಜಿ ಕಾವಲೇಶ್ವರಿ ನೂತನ ದೇವಸ್ಥಾನ ಹಾಗೂ ಕಳಸ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಹೇಮಾವತಿ ಡ್ಯಾಂನಿಂದ ತುಮಕೂರು ಜಿಲ್ಲೆಗೆ ಲಭ್ಯವಿರುವ ನೀರು ಈಗಾಗಲೆ ಹರಿಯುತ್ತಿದ್ದು ಕಳ್ಳಂಬೆಳ್ಳ ಕೆರೆಯಿಂದ ಶಿರಾ ದೊಡ್ಡ ಕೆರೆಗೆ ನೀರು ಹರಿಯುತ್ತಿದೆ. ಈ ಕೆರೆ ಭರ್ತಿಯಾದ ನಂತರ ಕಳೆದ ವರ್ಷ ನವೆಂಬರ್‍ನಲ್ಲಿ ಮದಲೂರು ಕಾಲುವೆಗೆ ನೀರು ಬಿಡಲಾಗಿತ್ತು. ಈ ವರ್ಷ ಕೂಡ ಅದೇ ಅವಧಿಯಲ್ಲಿ ನೀರು ಹರಿಯಲಿದೆ. ನೀರಿನ ಅಲೋಕೇಶನ್ ಎಂಬಂತೆ ಪ್ರತಿಪಕ್ಷಗಳು ಬಿಂಬಿಸಿ ನೀರಿನ ವಿಚಾರದಲ್ಲಿ ಕ್ಷೇತ್ರದ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಶಿರಾ ತಾಲ್ಲೂಕಿಗೆ 0.89 ಟಿಎಂಸಿ ನೀರು ನಿಗದಿಯಾಗಿದ್ದು, 2 ಕೆರೆ ಭರ್ತಿಯಾಗಿ ಸಿಗುವ ಹೆಚ್ಚುವರಿ ನೀರನ್ನು ಮದಲೂರು ಕೆರೆಗೆ ಹರಿಸಿ ಎಂದಿದ್ದಾರೆ. ಆದರೆ ಕಳ್ಳಂಬೆಳ್ಳ ನಾಲೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ 13ಕ್ಕೂ ಹೆಚ್ಚು ಬ್ಯಾರೇಜ್ ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲುವ ಕಾರಣ ಲಭ್ಯತೆಯ ಅರ್ಧ ನೀರು ಇಲ್ಲಿಯೇ ನಿಲ್ಲುತ್ತದೆ. ಉಳಿಕೆ ನೀರು ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗಳಿಗೆ ಸಾಕಾಗುತ್ತದೆ. ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಗಳ ರೈತ ಮತ್ತು ಜನರ ನೀರಿನ ಬವಣೆ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿ ಕೊಡಲಾಗಿದ್ದು, ಮದಲೂರು ಕೆರೆಗೆ ಹೇಮಾವತಿ ನೀರು ವರ್ಷಾಂತ್ಯದಲ್ಲಿ ಹರಿಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಶಾಸಕರು, ವರ ಮಹಾಲಕ್ಷ್ಮೀ ಎಲ್ಲರಿಗೂ ಸಕಲ ಸಂಪತ್ತು ಮತ್ತು ಆರೋಗ್ಯ ಕರುಣಿಸಲಿ ಎಂದು ವರ ಮಹಾಲಕ್ಷ್ಮೀ ಹಬ್ಬದ ಶುಭಾಶÀಯ ತಿಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Recent Articles

spot_img

Related Stories

Share via
Copy link