ಬರಗೂರು : ಆಕಸ್ಮಿಕ ಬೆಂಕಿಗೆ ಹಸುಗಳು ಬಲಿ

 ಬರಗೂರು : 

      ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹುಲ್ಲು ಬಣವೆಗೆ ಬೆಂಕಿ ಬಿದ್ದಿದ್ದು, ಅದರ ಪಕ್ಕದಲ್ಲೇ ಕಟ್ಟಿ ಹಾಕಿದ್ದ ಎರಡು ಹಸುಗಳು ಸೇರಿದಂತೆ ಹುಲ್ಲು ಬಣವೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾದ ಕರುಣಾಜನಕ ಘಟನೆ ಶಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ ಸೋಮವಾರ ಸಂಜೆ 5.30ರ ವೇಳೆ ಜರುಗಿದೆ.

     ಮೃತ ಹಸುಗಳ ಮಾಲಿಕ ರೈತ ಕುಮಾರ್’ಗೆ ಹೈನುಗಾರಿಕೆಯೆ ಆರ್ಥಿಕತೆಗೆ ಆಧಾರವಾಗಿತ್ತು. ಹಾಲನ್ನು ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದ ಕುಮಾರ್ ಹಸುಗಳ ಮೇವಿಗಾಗಿ ಸುಮಾರು 45 ಸಾವಿರ ವೆಚ್ಚ ಮಾಡಿ ಮೂರು ಲೋಡು ಜೋಳದ ಸೆಪ್ಪೆ ಮತ್ತು ಕಡಳೆ ಬಳ್ಳಿಯನ್ನು ಅವರ ಮನೆಯ ಪಕ್ಕದಲ್ಲೆ ಬಣವೆ ಹಾಕಿಕೊಂಡಿದ್ದರು. ಸೋಮವಾರ ಸಂಜೆ 5.30ರ ವೇಳೆಗೆ ಆಕಸ್ಮಿಕವಾಗಿ ಹುಲ್ಲು ಬಳವೆಗೆ ಬೆಂಕಿ ಹೊತ್ತಿಕೊಂಡಿದೆ. ಊರ ಹೊರ ಭಾಗದಲ್ಲಿರುವ ಹುಲ್ಲು ಬಣವೆಗೆ ಬೆಂಕಿ ಹೊತ್ತಿಕೊಂಡಿರುವುದು ಬೇಗನೆ ಜನರಿಗೆ ಗೋಚರವಾಗಿಲ್ಲ. ಬೆಂಕಿಯ ಜ್ವಾಲೆಗಳು ಹೆಚ್ಚಳವಾದ ನಂತರ ಕಂಡ ಹಲವು ಮಂದಿ ಬೆಂಕಿ ಆರಿಸಲು ಮುಂದಾಗಿದ್ದಾರೆ, ಆದರೆ ಸಾಧ್ಯವಾಗಿಲ್ಲ.

     ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಕಾಲ ಮಿಂಚಿ ಹೋಗಿ, ಸುಮಾರು 45 ಸಾವಿರ ರೂ.ಬೆಲೆ ಬಾಳುವ ಎರಡು ಹಸುಗಳು ಹಾಗೂ 45 ಸಾವಿರ ರೂ. ಮೌಲ್ಯದ ಹುಲ್ಲು ಬಣವೆ ಸುಟ್ಟು ಹೋಗಿದೆ.

      ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಮತ ಹಾಗೂ ಶಾಸಕ ರಾಜೇಶ್‍ಗೌಡ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಬರಗೂರು ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಪಾತರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂದಾಯ ತನಿಖಾಧಿಕಾರಿ ಹೊನ್ನಪ್ಪ, ಕಂದಾಯ ಇಲಾಖೆ ಸಿಬ್ಬಂದಿ ನರಸಿಂಹರಾಜು, ಅಗ್ನಿಶಾಮಕ ದಳದ ಲೀಡಿಂಗ್ ಫೈರ್ ಮನ್, ಸಿಬ್ಬಂದಿ ದೇವೇಂದ್ರಪ್ಪ ಕಾಳಗಿ, ಮಾರುತಿ, ಶಶಿಧರ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap