ಮುಂಬರುವ ದಿನಗಳಲ್ಲಿ ಸೋಮಣ್ಣ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿ : ಶ್ರೀ ಬಸವ ಮಹಾಲಿಂಗ ಸ್ವಾಮೀಜಿ

ಕೊರಟಗೆರೆ :-

    ರಾಜ್ಯದ ಅತ್ಯುತ್ತಮ ನಾಯಕರುಗಳಲ್ಲಿ ವಿ. ಸೋಮಣ್ಣ ಮುಂಚೂಣಿ ನಾಯಕರಾಗಿದ್ದು ಇವರಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಇಡುವ ಅವಕಾಶ ಒದಗಿ ಬರಲಿ ಎಂದು ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ಭವಿಷ್ಯ ನುಡಿದರು.

    ಕೊರಟಗೆರೆ ತಾಲೂಕಿನ ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠಕ್ಕೆ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಬಸವ ಮಹಾಲಿಂಗ ಸ್ವಾಮಿ ಗಳಿಂದ ಆಶೀರ್ವಾದ ಪಡೆದ ಬಳಿಕ ಶ್ರೀಗಳು ವಿ ಸೋಮಣ್ಣ ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ದೊರೆಯಲಿ ಎಂದು ಆಶೀರ್ವದಿಸಿದರು.

   ದೇಶ ಶಾಂತಿ ನೆಮ್ಮದಿ ಸಮಾನತೆ ಹೊಂದಿದೆ ಎಂದರೆ ಅದಕ್ಕೆ ಗುರು ಪರಂಪರೆಯಾಗುವ ಮಠ ಪರಂಪರೆ ಕಾರಣವಾಗಿದ್ದು, ಇದಕ್ಕೆ ಪೂರಕ ಎಂಬಂತೆ ವಿ . ಸೋಮಣ್ಣ ಮಠ ಪರಂಪರೆಯಲ್ಲಿ ಬಹಳಷ್ಟು ತೊಡಗಿಸಿಕೊಂಡಿದ್ದು ಇಂತಹ ನಾಯಕ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದರೆ ಇನ್ನಷ್ಟು ರಾಜ್ಯ ಸುಭಿಕ್ಷ ವಾಗಲಿದೆ ಎಂದು ಅಭಿಪ್ರಾಯಪಟ್ಟರು.

   ಕೇಂದ್ರ ಜಲ ವಿದ್ಯುತ್ ಹಾಗೂ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ ನಮ್ಮ ರಾಜ್ಯ ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಗೆ ವಿಶೇಷ ಸಂಬಂಧವಿದ್ದ ಅನ್ನದಾತ ತನ್ನ ಹಸಿವನ್ನು ಲೆಕ್ಕಿಸದೆ ದೇಶಕ್ಕೆ ಅನ್ನ ನೀಡಿದರೆ ಮಠಮಾನ್ಯಗಳು ಅಕ್ಷರ ಹಾಗೂ ದಾಸೋಹದ ಜೊತೆಗೆ ಜ್ಞಾನ ಭಂಡಾರವನ್ನ ಪ್ರತಿನಿತ್ಯ ನೀಡುವಂತೆ ಆಶ್ರಯದಾತರಗಿದ್ದು, ಮಠಮಾನ್ಯಗಳು ಜ್ಞಾನಾರ್ಜನೆಯ ಕೇಂದ್ರಗಳಾಗ್ಬೇಕು ಆ ನಿಟ್ಟಿನಲ್ಲಿ ಈ ಮಠವೂ ಸರ್ವತೋಮುಖ ಅಭಿವೃದ್ಧಿ ಪಡೆಯಲಿ ಇದಕ್ಕೆ ನಾವು ಸಹ ಸಹಕಾರ ನೀಡಲಿದ್ದೇವೆ ಎಂದರು .

   ಈ ಸಂದರ್ಭದಲ್ಲಿ ಧನ್ಯಕುಮಾರ್, ಪಂಚಾಕ್ಷರಿ, ಮಂಜು ಬಾರ್ಗಾವ್, ಶಿವಕುಮಾರ್, ದರ್ಶನ್, ರುದ್ರೇಶ್, ಹನುಮಂತಣ್ಣ ಸೇರಿದಂತೆ ಹಲವರು ಹಾಜರಿದ್ದರು.

Recent Articles

spot_img

Related Stories

Share via
Copy link