ಬಸವ ವಿಚಾರಧಾರೆ ಇಂದಿಗೂ ಪ್ರಸ್ತುತ

ದಾವಣಗೆರೆ:

        ವರ್ಗ ಭೇದ, ವರ್ಣ ಬೇಧ ಮತ್ತು ಅಸ್ಪøಶ್ಯತೆ ಇಲ್ಲದ ಜ್ಯಾತ್ಯತೀತತೆಯ ಆಧಾರದ ಮೇಲೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಅಭಿಪ್ರಾಯಪಟ್ಟರು.

        ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದ ಎಂಸಿಸಿ ‘ಎ’ ಬ್ಲಾಕ್‍ನಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದ ಅವರು,ಸತ್ಯ, ಅಹಿಂಸೆ ಪ್ರಮಾಣಿಕತೆ ಅಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿ ವಾದಿಸಿದ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

        ಪ್ರಜಾಪ್ರಭುತ್ವವು ಬಸವಣ್ಣನವರ ಉಸಿರಾಗಿತ್ತು. ಪ್ರಭುಗಳಿಗಿಂತ ಪ್ರಜೆಗಳೇ ದೊಡ್ಡವರು ಎಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆ ಇತ್ತು ಎಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಎಸ್.ಎಂ. ಜಯಪ್ರಕಾಶ್ ಲಿಯಾಕತ್ ಅಲಿ, ಡಿ. ಶಿವಕುಮಾರ್, ಹೆಚ್. ಹರೀಶ್, ಜಿ. ಸುರಜ್, ಹರೀಶ್, ಈರಣ್ಣ, ಮಂಜುನಾಥ್, ಎ. ಅಬ್ದುಲ್ ಜಬ್ಬಾರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link