ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು:

     ವ್ಯಕ್ತಿಯ ಸ್ಥಾನಮಾನದಿಂದ ಗೌರವ ದೊರೆಯುವುದಿಲ್ಲ. ಅವರ ಸಮಾಜಿಕ ನಡೆ ನುಡಿ ಜನರೊಂದಿಗೆ ಬೆರೆಯುವ ರೀತಿ ಅವರನ್ನು ನಾಯಕರಾಗಿ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

    ವಿಧಾನಸಭೆಯಲ್ಲಿ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಧ್ರುವ ನಾರಾಯಣ ಅವರು ಕ್ಷೇತ್ರದ ಜನರ ಜೊತೆ ಒಡನಾಟ ಹೊಂದಿದ್ದರು. ಲೋಕಸಭೆಯಲ್ಲಿ ಪ್ರಭಾವಶಾಲಿಯಾಗಿ ರಾಜ್ಯದ ಪರವಾಗಿ ಮಾತನಾಡಿದ್ದರು ಎಂದರು.

    ಡಿ. ಬಿ. ಇನಾಮ್ ದಾರ್ ಅತ್ಯಂತ ಸ್ನೇಹ ಜೀವಿಯಾಗಿದ್ದರು. ಅವರು ಓದಿಕೊಂಡಿದ್ದರು. ಅವರು ಗಣಿ ಸಚಿವರಿದ್ದಾಗ ಇಲ್ಲಿಯ ಗಣಿ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅವರು ಚಂದ್ರನಲ್ಲಿ ಗಣಿಗಾರಿಕೆ ಬಗ್ಗೆ ಮಾತನಾಡಿದ್ದರು. ಇತ್ತಿಚೆಗೆ ಪೇಪರ್ ನಲ್ಲಿ ಚಂದ್ರನಲ್ಲಿ ಗಣಿಗಾರಿಕೆ ನಡೆಯುವ ಬಗ್ಗೆ ಸುದ್ದಿ ಬಂದಿದೆ.
ಇನಾಮ್ ದಾರ್ ಅವರು ಮಲಪ್ರಭ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು‌. ಸಕ್ಕರೆ ಕಾರ್ಖಾನೆ ಮುಚ್ಚುವ ಸಂದರ್ಭದಲ್ಲಿ ಅದನ್ನು ಉಳಿಸಿ ಬೆಳೆಸಿದವರು ಎಂದರು.

    ಯು. ಆರ್ ಸಭಾಪತಿ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ವೆಂಕಟಸ್ವಾಮಿ ಶಾಸಕರಾಗಿ ಕೆಲಸ ಮಾಡಿದ್ದರು. ಉಮಾಕಾಂತ್ ಬೋಲ್ಕರ್ ಅವರ ಹೆಸರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೆಚ್ಚು ಚರ್ಚೆ ಇತ್ತು. ಧರ್ಮಪ್ಪ ಅವರು ಬಂಗಾರಪ್ಪ ಅವರ ಜೊತೆ ಇದ್ದವರು. ಹೋರಾಟದ ಮೂಲಕ ಬಂದವರು, ಭೂ ಸುಧಾರಣೆ, ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದರು. ಅವರ ಹೋರಾಟ ನಮಗೆ ಆದರ್ಶವಾಗಲಿ ಎಂದರು.

    ಖ್ಯಾತ ನೇತ್ರ ತಜ್ಞ ಡಾ‌ ಭುಜಂಗಶೆಟ್ಟಿ ಅವರು ನಮಗೆಲ್ಲರಿಗೂ ಚಿರಪರಿಚಿತರಾಗಿದ್ದರು. ನಮ್ಮಲ್ಲಿ ಅನೇಕ ವೈದ್ಯರಿದ್ದಾರೆ. ಆದರೆ ಕೆಲವೇ ಕೆಲವರು ದಾಖಲೆಯ ಕೆಲಸ ಮಾಡಿದ್ದಾರೆ. ಡಾ. ಎಂ.ಸಿ. ಮೋದಿಯವರು ಕಣ್ಣಿನ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ದಾಖಲೆ ಮಾಡಿದಂತೆ ಡಾ. ಭುಜಂಗಶೆಟ್ಟಿ ಅವರು ದಾಖಲೆಯ ಶಸ್ತ್ರಚಿಕಿತ್ಸೆ ಮಾಡಿದ್ದರು. ತುಮಕೂರಿನಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆ ತರೆದಿದ್ದು, ಅದು ಸಂಪೂರ್ಣ ಉಚಿತವಾಗಿದೆ. ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap