ಬೆಂಗಳೂರು:
ಸಿಎಂ ಆಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದ್ದು 5 ವರ್ಷಕ್ಕೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಸಿಎಂ ಸ್ಥಾನ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಆಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದ್ದು 5 ವರ್ಷಕ್ಕೆ, ಬದಲಾವಣೆ ಆಗಬೇಕಾದ್ರೆ ಸಿಎಲ್‌ಪಿ ಸಭೆಯಲ್ಲಿ ತೀರ್ಮಾನಿಸಬೇಕು. ಆದರೆ ಈಗ ಆ ಸಂದರ್ಭ ಬರುವುದೇ ಇಲ್ಲ ಎಂದರು.
ಯಾರು ಬೇಕಾದ್ರೂ ಸಿಎಂ ಆಗಬಹುದು, ಅದರಲ್ಲಿ ತಪ್ಪಿಲ್ಲ. ಆದರೆ ಈಗ ಆ ಸಂದರ್ಭ ಬಂದಿಲ್ಲ ಅಂತ ಹೇಳಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆ ಮುಖ್ಯಮಂತ್ರಿ ಆಗುವುದಕ್ಕೆ ಅರ್ಹ ವ್ಯಕ್ತಿ. ಖರ್ಗೆ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಹೇಳಿದವನು ನಾನು. ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಆಗಲಿ ಅಂತ ವಿಶ್ ಮಾಡ್ತೀನಿ. ಸಮಯ ಬಂದ್ರೆ ಖರ್ಗೆ ಪ್ರಧಾನಮಂತ್ರಿ ಆಗಬಹುದು ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಶನಿವಾರ ಬಿಎಂ ಪಾಟೀಲ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡುತ್ತ ಮಲ್ಲಿಕಾರ್ಜುನ ಖರ್ಗೆ ಅವರು, ತಮಗೆ ಸಿಎಂ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದೆ. ಆದರೆ ಸಿಎಂ ಆಗಿದ್ದು ಎಸ್‍ಎಂ ಕೃಷ್ಣ. ನಾನು ಸಲ್ಲಿಸಿದ ಸೇವೆ ನೀರಲ್ಲಿ ಹೋಯ್ತು ಎಂದಿದ್ದರು.
ಬ್ಲಾಕ್ ಅಧ್ಯಕ್ಷನಿಂದ ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಅಧಿಕಾರದ ಬೆನ್ನು ಹತ್ತಿ ಹೋಗಲಿಲ್ಲ. ಅದಾಗೇ ಸಿಕ್ಕಿದೆ. ಕರ್ನಾಟಕದ ಇತಿಹಾಸದಲ್ಲಿ ಬಹು ದಿನಗಳಿಂದ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಡಾ. ಜಿ. ಪರಮೇಶ್ವರ ಸಿಎಂ ಆಗಲಿ ಅಂತ ಜಗಳೂರು ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸಿಎಂ ಡಿಸಿಎಂ ಮಧ್ಯೆ ಮೊದಲೇ ಒಪ್ಪಂದ ಆಗಿದ್ದರೆ ಅಧಿಕಾರ ಹಂಚಿಕೆ ಆಗಲಿ ಅವರು ಹೇಳಿದ್ದಾರೆ.








