ನಾಯಕನಹಟ್ಟಿ :
ಮನೆಮನೆಗೆ ಬರುವ ಗಣತಿದಾರರಿಗೆ ವಿದ್ಯಾವಂತ ಯುವಕರು ಜಾತಿ ಗಣತಿ ವರದಿಯಲ್ಲಿ ಮಾದಿಗ ಅಂತ ಹೆಸರು ಬರಯಿಸಬೇಕೆಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜಪ್ಪ ಹೇಳಿದರು.
ನಾಯಕನಹಟ್ಟಿ ಸಮೀಪದ ಎನ್.ಗೌರಿಪುರ ಗ್ರಾಮದಲ್ಲಿ ಮಂಗಳವಾರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜಪ್ಪ ಜಾತಿ ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಮಾದಿಗ ಸಮುದಾಯದವರು ಜಾತಿ ಕಾಲಂ ನಲ್ಲಿ ಮಾದಿಗ ಎಂದು ಮಾತ್ರ ಬರೆಯಿಸಬೇಕು. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ, ಹರಿಜನ, ಎಸ್.ಸಿ ಅಂತ ಬರೆಯಿಸಬೇಡಿ ಎಂದು ಮನವಿ ಮಾಡಿಕೊಂಡರು. ಜಾತಿ ಕಾಲಂನಲ್ಲಿ 61ರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ನಮೂದಿಸಿ. ಒಳಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಫಲವಾಗಿ ಜಾತಿ ಗಣತಿ ಮುಂದಾಗಿವೆ ಎಂದು ಅವರು ಹೇಳಿದರು.
