ಖರ್ಗೆ ಪ್ರಧಾನಿಯಾದರೆ ಬಸವರಾಜ್ಯ ನಿರ್ಮಾಣ ಖಂಡಿತ : ಗಂಗಾಧರ ದೊಡವಾಡ

ಹುಬ್ಬಳ್ಳಿ

    ಹಿರಿಯ ಮುತ್ಸದ್ದಿ ರಾಜಕಾರಣಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿ ಆದರೆ 12ನೇ ಶತಮಾನದ ಬಸವ ರಾಜ್ಯದ ಆಡಳಿತ ಆರಂಭವಾಗುವುದು ಖಂಡಿತ ಸಾಧ್ಯವಾಗುತ್ತದೆ ಎಂದು ಹಿರಿಯ ಲಿಂಗಾಯತ ಮುಖಂಡ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಮಲ್ಲಿಕಾರ್ಜುನ ಖರ್ಗೆಯವರನ್ನು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಈ ಹಿಂದೆ ಅನೇಕರು ಈ ದೇಶವನ್ನು ನಾವು ಪ್ರಧಾನಿಗಳಾದಾಗ ರಾಮರಾಜ್ಯ ಮಾಡುತ್ತೇವೆ ರೈತರ ರಾಜ್ಯ ಮಾಡುತ್ತೇವೆ ಎಂದು ಘೋಷಣೆ ಕೂಗಿ ಅಧಿಕಾರಕ್ಕೆ ಬಂದು ರಾಮರಾಜ್ಯವನ್ನೂಮಾಡಲಿಲ್ಲ ರೈತ ರಾಜ್ಯವನ್ನೂ ಮಾಡಲಿಲ್ಲ ಕಲ್ಯಾಣ ಕರ್ನಾಟಕದ ಜಗಜ್ಯೋತಿ ಬಸವಣ್ಣನವರ ಪರಿಸರದಲ್ಲಿ ಬೆಳೆದು ಬಂದ ಮಲ್ಲಿಕಾರ್ಜುನ ಖರ್ಗೆ ಅಪ್ಪಟ ಬಸವವಾದಿಯಾಗಿದ್ದು ಬಸವಣ್ಣನವರ ಕಲ್ಪನೆಯ ಬಸವ ನಾಡು ನಿರ್ಮಿಸುವಲ್ಲಿ ಯಶಸ್ವಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap