ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ ಬಸವೇಶ್ವರ ಬಸ್‌ ನಿಲ್ದಾಣ….!

ಬೆಂಗಳೂರು

    ಬೆಂಗಳೂರಿನ ಈ ಭಾಗದಲ್ಲಿ 9 ವರ್ಷಗಳ ಹಿಂದೆ ನಿರ್ಮಾಣ ಆಗಿದ್ದ ಸುಸಜ್ಜಿತ KSRTC ಬಸ್‌ ನಿಲ್ದಾಣ ಕೊನೆಗೂ ಬಳಕೆಯಾಗುವ ಕಾಲ ಸನ್ನಿಹಿತವಾಗಿದೆ. ಹಾಗಾದರೆ ಈ ಬಸ್‌ ನಿಲ್ದಾಣದ ಹೆಸರೇನು, ಯಾವ ಉದ್ದೇಶಕ್ಕೆ ಇದನ್ನು ಬಳಕೆ ಮಾಡಲಾಗುತ್ತದೆ ಹಾಗೂ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

    ಪೀಣ್ಯದಲ್ಲಿ ಈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬದಲು ಕಾರ್ಗೊ ನಿಲ್ದಾಣವಾಗಿ ಉಪಯೋಗಕ್ಕೆ ಬರಲಿದೆ.  ಬೆಂಗಳೂರಿನಿಂದ ಕಾರ್ಯಾಚರಣೆ ಮಾಡುವ ಟ್ರಕ್‌ಗಳಿಗೆ ಪೀಣ್ಯದ ಬಸ್ವೇಶ್ವರ ನಿಲ್ದಾಣವನ್ನು ನಿಲುಗಡೆ ತಾಣವನ್ನಾಗಿ ಉಪಯೋಗಿಸಲು ಕೆಎಸ್‌ಆರ್‌ಟಿಸಿ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಕೆಎಸ್‌ಆರ್‌ಟಿಸಿ ಟ್ರಕ್‌ಗಳಿಗೆ ನಿನ್ನೆ ಚಾಲನೆ ನೀಡಲಾಗಿದೆ. ಇವುಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಪಾರ್ಸಲ್‌ ಸೇರಿದಂತೆ ಇನ್ನಿತರ ಕೆಎಸ್‌ಆರ್‌ಟಿಸಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. 44 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ ಈ ನಿಲ್ದಾಣವನ್ನು 2014ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಮೂರು ಅಂತಸ್ತಿನ ಈ ನಿಲ್ದಾಣದ ನೆಲ ಮಹಡಿಯ ಪ್ಲಾಟ್‌ಫಾರಂನಿಂದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ, ಮೊದಲ ಮಹಡಿಯಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುವ ಬಸ್‌ಗಳಿಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು.

     ಮೈಸೂರಿನ ಸಬ್‌ಹರ್ಬನ್‌ ಬಸ್‌ ನಿಲ್ದಾಣ ಸ್ಥಳಾಂತರ ಸಾಧ್ಯತೆ ಇನ್ನು ಎರಡನೇ ಮಹಡಿಯಲ್ಲಿ ವಸತಿಗೃಹ, ಹೋಟೆಲ್‌ ಹಾಗೂ ಅಂಗಡಿಗಳಿಗೆ ಮೀಸಲಾಗಿತ್ತು. ಗಂಗಮ್ಮನ ಗುಡಿ ಹೊರ ಠಾಣೆ, ಸುಸಜ್ಜಿತ ಆಸನ ವ್ಯವಸ್ಥೆ, ಲಿಫ್ಟ್‌, ಕುಡಿಯುವ ನೀರು, ಶೌಚಾಲಯ, ಭದ್ರತೆ, ವೈಫೈ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿತ್ತು.

   20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮೆಜೆಸ್ಟಿಕ್‌ ಬದಲು ಇಲ್ಲಿಂದಲೇ ಬಸ್‌ ಸಂಚರಿಸುವಂತೆ ಮಾಡಿ, ಜಿಲ್ಲೆಗಳಿಂದ ಬರುವ ಬಸ್‌ಗಳಿಗೆ ಇದೇ ಕೊನೇ ನಿಲ್ದಾಣನ್ನಾಗಿ ಮಾಡಿ ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂಬುದು ಉದ್ದೇಶ ಆಗಿತ್ತು. ಹೆದ್ದಾರಿಯಿಂದ 1 ಕಿಲೋ ಮೀಟರ್‌ ಒಳಗೆ ಇರುವ ಈ ಬಸ್‌ ನಿಲ್ದಾಣದಿಂದ ಕೆಲವೇ ವಾರ ಬಸ್‌ಗಳು ಸಂಚರಿಸಿದ್ದವು. ಪ್ರಯಾಣಿಕರ ನೀರಸ ಸ್ಪಂದನೆ ಮತ್ತು ಖಾಸಗಿ ಬಸ್‌ ಮಾಲೀಕರ ಒತ್ತಡದಿಂದಾಗಿ ಬಳಿ ನಿಂತು ಹೋಯಿತು.

    ಏಪ್ರಿಲ್‌ 2018ರಲ್ಲಿ ಮತ್ತೆ ಬಸ್‌ ಸಂಚಾರ ಶೂರುವಾಗಿತ್ತು. ಆರಂಭವಾಗಿ ಮೊದಲು 60 ಬಸ್‌ಗಳು ಬಸವೇಶ್ವರ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ಶುರು ಮಾಡಿದ್ದವು. ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ದೂರದ ಊರಿಗೆ ಪ್ರಯಾಣ ಮಾಡುವವರು ಮೆಜೆಸ್ಟಿಕ್‌ಗೆ ಬರುವುದನ್ನು ನಿಲ್ಲಿಸಲಿಲ್ಲ. ಪೀಣ್ಯ ಬಸ್‌ ನಿಲ್ದಾಣಕ್ಕೆ ಹೋಗಲಿಲ್ಲ. ಅಲ್ಲಿಂದ ಸಂಚರಿಸಿದ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ನಷ್ಟವಾಗಿ, 6 ತಿಂಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದವು.

   2018ರ ಅಕ್ಟೋಬರ್‌ ನಂತರ ಯಾವುದೇ ಬಸ್‌ಗಳ ಸಂಚಾರ ಬಸವೇಶ್ವರ ನಿಲ್ದಾಣದಿಂದ ಸ್ಥಗಿತವಾಗಿತ್ತು. ಒಂದು ವೇಳೆ ಆಗ ಈ ಬಸ್‌ ನಿಲ್ದಾಣ ಬಳಕೆಯಾಗಿದ್ದರೆ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತುಂಬಾ ಕಡಿಮೆ ಆಗುತ್ತಿತ್ತು. ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಧರ್ಮಸ್ಥಳ ಸೇರಿದಂತೆ 20ಕ್ಕೂ ಹೆಚ್ಚು ಜಿಲ್ಲೆಗಳು ತಿರುಪತಿ ಸೇರಿದಂತೆ ಬೇರೆ ರಾಜ್ಯಗಳ ಪ್ರಮುಖ ಪ್ರದೇಶಗಳಿಗೆ 2,200ಕ್ಕೂ ಅಧಿಕ ಬಸ್‌ಗಳು ಪ್ರತಿ ದಿನ ಸಂಚರಿಸುತ್ತಿದ್ದು, ಅವೆಲ್ಲ ಪೀಣ್ಯಕ್ಕೆ ಬಂದು ಅಲ್ಲಿಂದಲೇ ವಾಪಸ್‌ ಆಗುತ್ತಿದ್ದವು.

   ಆದ್ದರಿಂದ ಇದನ್ನು ಇದೀಗ ಕಾರ್ಗೊ ಸೇವೆ ಟ್ರಕ್‌ಗಳಿಗೆ ಬಳಕೆ ಮಾಡಲು ಉದ್ದೇಶಿಸಿರುವುದು ಉತ್ತಮ ನಿರ್ಧಾರವೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನು ಪೀಣ್ಯದಲ್ಲಿ ಡಿಪೋ ಮಾಡುವ ಬದಲು ಬಸ್‌ ನಿಲ್ದಾಣ ಮಾಡಿದ್ದರಿಂದ ಸಮಸ್ಯೆ ಆಯಿತು. ಜಯನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಪೀಣ್ಯ ಬಸ್‌ ನಿಲ್ದಾಣಕ್ಕೆ ಹೋಗುವುದೇ ಸಮಸ್ಯೆ ಆಗಿತ್ತು. ಪ್ರಯಾಣಿಕರು ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೇ ಬರುತ್ತಿದ್ದರು. ಆದ್ದರಿಂದ ಇದೀಗ ಇದನ್ನು ಕಾರ್ಗೋ ಟ್ರಕ್‌ ನಿಲ್ದಾಣವಾಗಿ ಬಳಸಲು ನಿರ್ಧರ ಮಾಡಿದ್ದೇವೆ. ಈ ನಿಲ್ದಾಣದಲ್ಲಿಯೂ ಇನ್ನು ಚಟುವಟಿಕೆಗಳನ್ನು ಕಾಣಲು ಸಾಧ್ಯ ಎಂದು ಸವಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap