ಜಗತ್ತಿಗೆ ಮತ್ತೆ ಬರಲಿದೆ ಮತ್ತೊಂದು ಕೊರೋನಾ ವೈರಸ್‌ : ಬ್ಯಾಟ್‌ ವುಮೆನ್‌

ನವದೆಹಲಿ :

    ಪ್ರಾಣಿಗಳಿಂದ ಉತ್ಪತ್ತಿಯಾಗಬಲ್ಲ ವೈರಸ್​ಗಳ ಬಗ್ಗೆ ನಡೆಸಿದ ವ್ಯಾಪಕ ಸಂಶೋಧನೆಯಿಂದಾಗಿ ಬ್ಯಾಟ್​ ವುಮನ್​ ಎಂಬ ಖ್ಯಾತಿಯನ್ನು ಗಳಿಸಿರುವ ಚೀನಾದ ವೈರಾಲಜಿಸ್ಟ್​ ಶಿ ಝೆಂಗ್ಲಿ ಇದೀಗ ಮತ್ತೊಂದು ಆಘಾತಕಾರಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಇತ್ತೀಚಿನ ಲೇಖನದಲ್ಲಿ ಭವಿಷ್ಯದಲ್ಲಿ ಮತ್ತೊಂದು ಕೊರೊನಾ ವೈರಸ್​ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಶಿ ಹೇಳಿದ್ದಾರೆ. 

    ವುಹಾನ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯ ಶಿ ಹಾಗೂ ಅವರ ತಂಡವು 40 ವಿವಿಧ ಕೊರೊನಾ ವೈರಸ್​​ ಪ್ರಭೇಧಗಳ ಮೌಲ್ಯಮಾಪನವನ್ನು ನಡೆಸಿದೆ. ಇದು ಮಾನವರ ಮೇಲೆ ಹರಡಲಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ 40 ಪ್ರಭೇದಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ಅತ್ಯಂತ ಅಪಾಯಕಾರಿ ಎಂದು ತಿಳಿಸಲಾಗಿದೆ.

    ಭವಿಷ್ಯದ ಸೋಂಕುಗಳ ಬಗ್ಗೆ ನಡೆಸಲಾದ ಅಧ್ಯಯನದಲ್ಲಿ ಭವಿಷ್ಯದಲ್ಲಿ ಅಪಾಯಕಾರಿ ಕೊರನಾ ವೈರಸ್​ ಸಂಬಂಧಿ ಕಾಯಿಲೆಗಳು ಹುಟ್ಟಿಕೊಳ್ಳಲಿದೆ ಎಂದು ಸಂಶೋಧನೆಯು ತಿಳಿಸಿದೆ.ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಸಂಭಾವ್ಯ ಲ್ಯಾಬ್ ಸೋರಿಕೆಯಿಂದ COVID-19 ಹುಟ್ಟಿಕೊಂಡಿದೆ ಎಂಬ ಅಮೆರಿಕದ ಕೆಲ ರಾಜಕಾರಣಿಗಳ ಬಲವಾದ ಆರೋಪದ ಬಳಿಕ ಶಿ ಝೆಂಗ್ಲಿ ಕೆಲವು ವಿವಾದದಲ್ಲಿ ಸಿಲುಕಿದ್ದರು.

     ಆದರೆ ಲ್ಯಾಬ್​​ನಲ್ಲಿ ನಿಜವಾಗಿಯೂ ವೈರಸ್​ ಸೋರಿಕೆಯಾಯ್ತೇ ಎನ್ನುವುದು ಇಂದಿಗೂ ಅನುಮಾನಾಸ್ಪದವಾಗಿಯೇ ಉಳಿದಿದೆ. ಅನೇಕ ವಿಜ್ಞಾನಿಗಳು ಬಾವಲಿಗಳಿಂದ ಈ ಸೋಂಕು ಹುಟ್ಟಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap