ಬಿಬಿಎಂಪಿ: 4.30 ಕೋ.ರೂ ವೆಚ್ಚದಲ್ಲಿ 1.84 ಲಕ್ಷ ಬೀದಿನಾಯಿಗಳಿಗೆ ಲಸಿಕೆ

ಬೆಂಗಳೂರು: 

   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ ಈ ವರ್ಷ ಹೊಸದಾಗಿ ಪರಿಚಯಿಸಲಾದ ‘ಸಂಯೋಜಿತ ಲಸಿಕೆ’ಯನ್ನು 1.84 ಲಕ್ಷ ಬೀದಿ ನಾಯಿಗಳಿಗೆ ಹಾಕುವ ಗುರಿ ಹೊಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಯೋಜಿತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀದಿ ನಾಯಿಗಳಿಗೆ ಬಹು-ರೋಗ ಲಸಿಕೆಯನ್ನು ನೀಡುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿದ 4.98 ಕೋಟಿ ರೂಪಾಯಿ ಬಜೆಟ್‌ನಲ್ಲಿ, 4.40 ಕೋಟಿ ರೂಪಾಯಿಗಳನ್ನು ಲಸಿಕೆಗಾಗಿ ಬಳಸಿ ಉಳಿದ ಹಣವನ್ನು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಗಾಗಿ ಬಳಸಲಾಗುವುದು ಎಂದರು.  ಬಿಬಿಎಂಪಿ ಪಶುಸಂಗೋಪನಾ ಇಲಾಖೆಯು ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಣಿ ಜನನ ನಿಯಂತ್ರಣ (ABC) ಕಾರ್ಯಕ್ರಮ ಮತ್ತು ರೇಬೀಸ್ ವಿರೋಧಿ ಲಸಿಕೆ (ARV)ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.

   ಬೀದಿ ನಾಯಿಗಳಲ್ಲಿ ಮಾರಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಂಯೋಜಿತ ಲಸಿಕೆ ಕಾರ್ಯಕ್ರಮದ ಅಗತ್ಯವಿದೆ. ಬಿಬಿಎಂಪಿಯ 2023 ರ ಸಮೀಕ್ಷೆಯಲ್ಲಿ ಗುರುತಿಸಲಾದ 2.79 ಲಕ್ಷ ಬೀದಿ ನಾಯಿಗಳಲ್ಲಿ, ಶೇಕಡಾ 50ಕ್ಕಿಂತ ಹೆಚ್ಚು ನಾಯಿಗಳು ಪ್ರಸ್ತುತ ಸಂಯೋಜಿತ ಲಸಿಕೆ ಕಾರ್ಯಕ್ರಮಕ್ಕೆ ಒಳಗಾಗುತ್ತಿವೆ ಎಂದರು.

Recent Articles

spot_img

Related Stories

Share via
Copy link