ಬೆಂಗಳೂರು :
ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಏರ್ ಫೋರ್ಸ್ ಸ್ಟೇಷನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟ ನಿಷೇಧಗೊಳಿಸಿ, ಬಿಬಿಎಂಪಿ ಆದೇಶ ಹೊರಡಿಸಿದೆ.
ನಗರದಲ್ಲಿ ಫೆಬ್ರವರಿ 3ರಿಂದ ಫೆಬ್ರವರಿ 5ರವರೆಗೆ ಯಲಹಂಕದ ಏರ್ ಬೇಸ್ ನಲ್ಲಿ ಏರೋ ಇಂಡಿಯಾ-2021 ನಡೆಯಲಿದೆ. ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆಯುತ್ತಿರುವಂತ ಏರ್ ಶೋ ನಡೆಯುವಂತ ಪ್ರದೇಶದ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಂಸ ಮಾರಾಟ ನಿಷೇಧಗೊಳಿಸಿ, ಬಿಬಿಎಂಪಿ ಆದೇಶ ಹೊರಡಿಸಿದೆ.
ಏರ್ ಫೋರ್ಸ್ ಸ್ಟೇಷನ್ ಸುತ್ತಮುತ್ತಲಿನ 10ಕಿಲೋ ಮೀಟರ್ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನ ಬಂದ್ ಮಾಡಬೇಕು ಹಾಗೂ ಹೊಟೇಲ್- ಡಾಬಾಗಳಲ್ಲಿ ಮಾಂಸಹಾರಿ ಪದಾರ್ಥಗಳನ್ನ ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಿ ಬಿಬಿಎಂಪಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ಆಜ್ಞೆಯನ್ನ ಉಲ್ಲಂಘಿಸಿದಲ್ಲಿ ಕೆಎಂಸಿ ಕಾಯ್ದೆ 1976ರ ಸೆಕ್ಷನ್ 2(22) ಹಾಗೂ ಸೆಕ್ಷನ್ 353(5) ರಂತೆ ಮತ್ತು ಭಾರತೀಯ ಏರ್‌ಕ್ರಾಫ್ಟ್ ರೂಲ್ಸ್ 1937ರ 91 ರೀತಿ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ