ಅಂಡರ್‌ ಪಾಸ್‌ ಅವಾಂತರಕ್ಕೆ ಬ್ರೇಕ್‌ ಹಾಕಲು ಬಿಬಿಎಂಪಿ ಹೊಸ ತಂತ್ರ…!

ಬೆಂಗಳೂರು

     ನಗರದ ಕೆ.ಆರ್‌.ವೃತ್ತದಲ್ಲಿ ಉದ್ಯೋಗಿ ಭಾನುರೇಖಾ ಸಾವಿನ ಬಳಿಕ ಅಂಡರ್‌ಪಾಸ್‌ ಸರ್ವೇ ಮಾಡಿ ನೀಡಿರುವ ವರದಿಯಲ್ಲಿ ಅಂಡರ್‌ಪಾಸ್‌ಗಳಲ್ಲಿ ವಾಹನ ಸಂಚಾರಕ್ಕೆ ಬೂಮ್ ಬ್ಯಾರಿಯರ್ಸ್  ಸೇರಿದಂತೆ ಕೆಲವು ಕ್ರಮಗಳ ಅಳವಡಿಕೆಯ ಚಿಂತನೆ ನಡೆದಿದೆ.

   ಇತ್ತೀಚೆಗೆ ಸುರಿದ ಜೋರು ಮಳೆ ಕೆ.ಆರ್‌. ವೃತ್ತ ಅಂಡರ್‌ಪಾಸ್‌ನಲ್ಲಿ ಸಂಚರಿಸುವ ವೇಳೆ ನೀರಿನಲ್ಲಿ ಸಿಲುಕಿ ಸಾಫ್ಟವೇರ್ ಉದ್ಯೋಗಿ 23 ವರ್ಷದ ಭಾನುರೇಖಾ ಮೃತಪಟ್ಟರು. ಅದಕ್ಕೆ ಬಿಬಿಎಂಪಿ ಮತ್ತು ಕಾರು ಚಾಲಕ ಇಬ್ಬರ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಯಿತು. ಈ ದುರಂತ ಬಳಿಕ ಮುಂದೆ ಹೀಗಾಗದಂತೆ ತಡೆಯಲು ಮುಂದಾದ ಬಿಬಿಎಂಪಿಗೆ ಮೂರು ಪುಟಗಳ ವರದಿಯೊಂದನ್ನು ಮುಖ್ಯ ಇಂಜಿನಿಯರ್‌ಗಳು ಸಲ್ಲಿಸಿದ್ದಾರೆ. 

    ಮಳೆಗಾಲದಲ್ಲಿ ಅಪಾಯ ತಡೆಗೆ 18 ಅಂಡರ್‌ಪಾಸ್‌ಗಳ ಸರ್ವೇ ನಡೆಸಿದ್ದಾರೆ. ಇದರಲ್ಲಿ ಕೈಗೊಳ್ಳಬಹುದಾದ ಹಲವು ಕ್ರಮಗಳಲ್ಲಿ ಬೂಮ್ ಬ್ಯಾರಿಯರ್ ಸಹ ಒಂದಾಗಿದೆ. ಇದರ ನಿರ್ವಹಣೆಯನ್ನು ಸಂಚಾರ ಪೊಲೀಸರೇ ಮಾಡಬೇಕಿದೆ. ಟೋಲ್‌ ಪ್ಲಾಜಾದಲ್ಲಿ ಶುಲ್ಕ ಕಟ್ಟುವ ಮುನ್ನ ಹೇಗೆ ವಾಹನ ಚಾಲನೆಗೆ ನಿಯಂತ್ರಿಸುತ್ತಾರೋ ಅದೇ ಮಾದರಿಯಲ್ಲಿ ಮಳೆಗಾಲದಂತಹ ಸನ್ನಿವೇಶದಲ್ಲಿ ಅಂಡರ್‌ಪಾಸ್‌ಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುವ ಪ್ಲಾನ್ ಇದಾಗಿದೆ.

       ದೇವರಿಗೆ ನಮಸ್ಕರಿಸಿ ವಿಭೂತಿ ಹಚ್ಚಿಕೊಂಡ ಡಿಕೆ ಶಿವಕುಮಾರ್ ಮಳೆ ಎಫೆಕ್ಟ್; ಮಂಗಳವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್ ಸಂಚಾರಕ್ಕೆ ಅಂಡರ್‌ಪಾಸ್‌ ಏಕೈಕ ಮಾರ್ಗವಲ್ಲ ಸರ್ವೇ ವೇಳೆ ಅಧಿಕಾರಿಗಳು 2009 ಮತ್ತು 2011 ರಲ್ಲಿ ನಿರ್ಮಿಸಲಾದ ಯು-ಆಕಾರದ ಅಂಡರ್‌ಪಾಸ್‌ನ ಸ್ಥಿತಿಯನ್ನು ಅಧ್ಯಯನ ಮಾಡಿದ್ದಾರೆ. ಬಿಬಿಎಂಪಿ ಪ್ರಕಾರ, ಅಂಡರ್‌ಪಾಸ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಎಂದು ತಿಳಿಸಿದ್ದಾರೆ.

    ಕೆ.ಆರ್ ಸರ್ಕಲ್‌ನಲ್ಲಿರುವ ಅಂಡರ್‌ಪಾಸ್ ಇದು ಸಿಗ್ನಲ್‌ನಲ್ಲಿ ಕಾಯುವ ಸಮಯ ಉಳಿಸಲು ಮಾಡಿದ ಅಂಡರ್‌ಪಾಸ್‌ ಆಗಿದೆ. ಆದರೆ ಅದೇ ಮಾರ್ಗದಲ್ಲೇ ಸಂಚರಿಸಬೇಕು ಎಂಬುದೇನು ಇಲ್ಲ. ಸಿಗ್ನಲ್ ಮೂಲಕವೇ ಈ ವೃತ್ತ ದಾಟಬಹುದು ಎಂದು ಬಿಬಿಎಂಪಿ ಪ್ರತಿಪಾದಿಸಿದೆ. ಇನ್ನೂ ಜಂಕ್ಷನ್‌ ನಲ್ಲಿ ಕೆ.ಆರ್‌. ವೃತ್ತವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಇಲ್ಲಿ ಸಿಸಿಟಿವಿ ಅಳವಡಿಸುವಂತೆ ಅವರು ಹೇಳಿದ್ದು, ಶೀಘ್ರವೇ ಅಳಡಿಸಲಾಗುವುದು. ಅಲ್ಲದೇ ಈಗಲೂ ಸಹ ಬ್ಯಾರಿಕೇಡ್ ತಳ್ಳಿ ಜನ ಅದೇ ಅಂಡರ್‌ಪಾಸ್ ಮೂಲಕ ಹಾದು ಹೋಗುತ್ತಿರುವುದು ಕಂಡು ಬಂದಿದೆ. ಹೊಸ ಒಳಚರಂಡಿ ಮತ್ತು ಹಂಪ್ ನಿರ್ಮಾಣದ ಪ್ರಸ್ತಾಪ ವರದಿಗಳಲ್ಲಿ ಬೂಮ್ ಬ್ಯಾರಿಯರ್ ಕ್ರಮದ ಜೊತೆಗೆ ಇನ್ನೆರಡು ಕ್ರಮಗಳೆಂದರೆ ಬಿದ್ದ ಮಳೆ ನೀರು ಹರಿಯುವಾಗ ಅಂಡರ್‌ಪಾಸ್‌ ಪ್ರವೇಶಿಸದಂತೆ ಅಂಡರ್‌ಪಾಸ್‌ನ ಸುತ್ತಲೂ ಹಂಪ್‌ಗಳನ್ನು ನಿರ್ಮಿಸಸುವುದು.

    ಅಲ್ಲದೇ ಅಂಡರ್‌ಪಾಸ್ ಸುತ್ತಲೂ ಹೊಸ ಒಳಚರಂಡಿ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿದರೆ ಮಳೆ ನೀರು ಒಳಚರಂಡಿ ಮೂಲಕ ಹರಿದು ಹೋಗುತ್ತದೆ ಆಗ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಸದ್ಯ 18 ಸರ್ವೇ ನಡೆಸಿರುವ ಬಿಬಿಎಂಪಿ ಉಳಿದ 53 ಅಂಡರ್‌ಪಾಸ್‌ಗಳನ್ನು ಮುಂದಿನ ಮೂರು ದಿನಗಳಲ್ಲಿ ಲೆಕ್ಕಪರಿಶೋಧನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ.

    ಅದರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಿದೆ. ಯುವತಿ ಭಾನುರೇಖಾ ಸಾವಿನ ಬಳಿಕ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಹೋಗುವ ಜಾಗದಲ್ಲಿ ಹುದುಗಿದ್ದ ಮರದ ಎಲೆ, ಕೊಂಬೆಗಳನ್ನು ಅಗ್ನಿಶಾಮಕ ಸಿಬ್ಬಂದಿ ತೆರವುಗೊಳಿಸಿದ ನಂತರವೇ ನೀರು ಸರಾಗವಾಗಿ ಹರಿದು ಹೋಯಿತು. ಈ ಅಂಡರ್‌ಪಾಸ್ ಕೆಳಭಾಗದಲ್ಲಿ 0.6 ಮೀಟರ್ ಅಗಲದ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಹರಿದು ಹೋಗುವ ನೀರು ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಹಾದು ಹೋಗುವ ರಾಜಕಾಲುವೆಗೆ ಸೇರುವಂತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap