ಕಿರಣ್ ಮಜುಂದಾರ್- ಶಾ ಟ್ವೀಟ್ ಗೆ ಸ್ಪಂದಿಸಿದ ಬಿಬಿಎಂಪಿ!

ಬೆಂಗಳೂರು:

    ಬೊಮ್ಮನಹಳ್ಳಿ ವಲಯದ ಬೇಗೂರು ಮತ್ತು ಅರೆಕೆರೆ ವ್ಯಾಪ್ತಿಯಲ್ಲಿ ಗುಂಡಿಗಳನ್ನು ಸರಿಪಡಿಸಿರುವ ಬಿಬಿಎಂಪಿಯು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸುತ್ತಿದೆ. ಈ ಪ್ರದೇಶವು ಐಟಿ ಕಾರಿಡಾರ್‌ನ ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುತ್ತದೆ, ಇದು ಹಲವಾರು ವ್ಯಾಪಾರ ಸಂಸ್ಥೆಗಳು ಮತ್ತುಸ್ಟಾರ್ಟ್ ಅಪ್ ಕಂಪನಿಗಳನ್ನು ಹೊಂದಿದೆ.

   ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ವ್ಯಾಪ್ತಿಗೆ ಬರುವ ಬೇಗೂರು, ಬೃಂದುವನ ಲೇಔಟ್ ಮತ್ತು ಅರೆಕೆರೆಯ ಮೈಕೋ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ವಿಟ್ಟಸಂದ್ರ ಮುಖ್ಯರಸ್ತೆಯಲ್ಲಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಡಾಂಬರು ಮತ್ತು ಟಾರ್ ಹಾಕುವಿಕೆಯನ್ನು ಪರಿಶೀಲಿಸಿದರು.

   ನವೆಂಬರ್‌ನಲ್ಲಿ, ಬಯೋಕಾನ್ ಸಂಸ್ಥಾಪಕ ಕಿರಣ್ ಮಜುಂದಾರ್-ಶಾ ಅವರು ಹದಗೆಟ್ಟ ರಸ್ತೆಯ ಸ್ಥಿತಿಯನ್ನು ಎತ್ತಿ ತೋರಿಸಿದರು. ರಸ್ತೆ ಡಾಂಬರೀಕರಣದ ಕೆಲಸವನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಗೆ ಹಸ್ತಾಂತರಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು, ಏಕೆಂದರೆ ELCITA ತನ್ನ ಎಲ್ಲಾ ರಸ್ತೆಗಳನ್ನು ಉತ್ತಮವಾಗಿ ನಿರ್ವಹಿಸಿದೆ ಎಂದು ಅವರು ಹೇಳಿದರು.

   ಕೆಟ್ಟ ರಸ್ತೆ ಮೂಲಸೌಕರ್ಯದಿಂದ ಬಳಲುತ್ತಿರುವ ಈ ಐಟಿ ಬೆಲ್ಟ್‌ನಲ್ಲಿ ವಾಹನ ಚಾಲಕರು ಮತ್ತು ಕಚೇರಿಗೆ ಹೋಗುವವರ ಸಮಸ್ಯೆ ಬಗ್ಗೆ ವಿವರಿಸಿದ್ದರು. ಇದಾದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನಗರ ತಜ್ಞರು ಮತ್ತು ಇತರ ಕಾರ್ಪೊರೇಟ್‌ಗಳನ್ನು ಭೇಟಿಯಾಗಿ ಚರ್ಚಿಸಿ ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರದೊಂದಿಗೆ ಸಹಕರಿಸುವಂತೆ ಸೂಚಿಸಿದ್ದರು.

Recent Articles

spot_img

Related Stories

Share via
Copy link