ಯೂಟರ್ನ್ ಹೊಡೆದ ಬಿಸಿಸಿಐ; ಏಷ್ಯಾಕಪ್‌ ಸಭೆಗೆ ಹಾಜರ್‌!

ನವದೆಹಲಿ:

     ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟ ಪರಿಣಾಮ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ನ ಸಭೆಯನ್ನು ಬಿಸಿಸಿಐ ಬಹಿಷ್ಕರಿಸಿದ್ದು, ಹೀಗಾಗಿ ಈ ಬಾರಿ ನಡೆಯಬೇಕಿದ್ದ ಏಷ್ಯಾಕಪ್‌ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಇದೀಗ ಬಿಸಿಸಿಐ ಜುಲೈ 24, ಗುರುವಾರ ಢಾಕಾದಲ್ಲಿ ನಡೆಯುವ ಏಷ್ಯಾಕಪ್ ಸಭೆಯಲ್ಲಿ ವಾಸ್ತವಿಕವಾಗಿ ಭಾಗವಹಿಸಲು ಸಜ್ಜಾಗಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

     ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಇಂದು ನಡೆಯುವ ಸಭೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಇದಕ್ಕೂ ಮೊದಲು, ಬಿಸಿಸಿಐ ಮತ್ತು ಇತರ ಹಲವಾರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯರು ಸಭೆಯ ಸ್ಥಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು.

    ಜುಲೈ 19 ರಂದು ಬಿಸಿಸಿಐ ಅಧಿಕೃತವಾಗಿ ಎಸಿಸಿ ಮತ್ತು ಸಭೆಯ ಅಧ್ಯಕ್ಷರಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಢಾಕಾದಲ್ಲಿ ನಡೆದರೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿತ್ತು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಸಂಬಂಧಗಳು ಹದಗೆಟ್ಟಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

    ಶ್ರೀಲಂಕಾ, ಒಮಾನ್‌ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್‌ ಮಂಡಳಿಗಳೂ ಭಾರತದ ಈ ನಡೆಯನ್ನು ಬೆಂಬಲಿಸಿತ್ತು. ಇಷ್ಟೆಲ್ಲಾ ವಿರೋಧದ ನಡುವೆಯೂ ಢಾಕಾದಲ್ಲಿಯೇ ಸಭೆ ನಡೆಸಲು ಮೊಹ್ಸಿನ್‌ ನಖ್ವಿ ಮುಂದಾಗಿದ್ದರು. ಅಲ್ಲದೆ ಯಾವುದೇ ಸದಸ್ಯರು ಢಾಕಾಗೆ ಬರಲು ಬಯಸದಿದ್ದರೆ, ಆನ್‌ಲೈನ್ ಹಾಜರಾತಿಗೆ ವ್ಯವಸ್ಥೆಗಳಿವೆ ಎಂದು ಹೇಳಿದ್ದರು. ಅದರಂತೆ ಬಿಸಿಸಿಐ ಆನ್‌ಲೈನ್‌ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ ಎನ್ನಲಾಗಿದೆ. 

    ಇನ್ನೊಂದು ವರದಿಯ ಪ್ರಕಾರ, ಸೆಪ್ಟೆಂಬರ್‌ 5ರಿಂದ ಏಷ್ಯಾಕಪ್‌ ಟಿ20 ಪಂದ್ಯಾವಳಿ ಆರಂಭವಾಗಲಿದ್ದು, ಬುದ್ಧ ಎದುರಾಳಿ ಭಾರತ-ಪಾಕಿಸ್ತಾನ ತಂಡಗಳು ಸೆ. 17ರಂದು ಮುಖಾಮುಖೀ ಆಗಲಿವೆ. ಸೆ. 21ರಂದು ಫೈನಲ್‌ ನಡೆಯಲಿದೆ. ಟೂರ್ನಿ ಯುಎಇಯಲ್ಲಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

Recent Articles

spot_img

Related Stories

Share via
Copy link