ರಾತ್ರಿ ವೇಳೆ ಈ 7 ಅಭ್ಯಾಸಗಳಿದ್ದರೆ BECAREFULL ನಿಮಗೆ ಎದುರಾಗಬಹುದು ಈ ಸಮಸ್ಯೆ….!

ಬೆಂಗಳೂರು :

   ರಾತ್ರಿ ದೇಹಕ್ಕೆ ವಿಶ್ರಾಂತಿ ಬೇಕೇ ಬೇಕು. ಅದು ದಿನವಿಡೀ ದುಡಿದು ಜಖಂ ಆದ ದೇಹ ರಿಪೇರಿ ಆಗುವ ಸಮಯ. ರಾತ್ರಿಯ ನಮ್ಮ ಹಲವು ಹವ್ಯಾಸಗಳು ನಮ್ಮ ಸುಂದರ ನಿದ್ದೆಯ ಸಾಧ್ಯತೆಯನ್ನು ಹಾಳು ಮಾಡಿ ಖಂಡಿತವಾಗಿಯೂ ಹೃದಯದ ಆರೋಗ್ಯದ ಮೇಲೆ ಕೆಡುಕಿನ ಪರಿಣಾಮ ಬೀರುತ್ತವೆ. ಅಂಥ ಅಭ್ಯಾಸಗಳು ಯಾವುವು ಅಂತ ನೋಡೋಣ.

   ಹೃದಯ ಬಹಳ ಸೂಕ್ಷ್ಮ. ಹೃದ್ರೋಗ ಇದ್ದರೆ ಕೆಲವೊಮ್ಮೆ ಅದು ಸ್ಪಷ್ಟವಾದ ರೋಗಲಕ್ಷಣಗಳನ್ನು ತೋರಿಸುತ್ತದೆ. ಆದರೆ ಕೆಲವೊಮ್ಮೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗಳು ಸಂಭವಿಸಬಹುದು. ಇದು ಯಾವುದೇ ಎದೆ ನೋವು ಅಥವಾ ಉಸಿರಾಟದ ತೊಂದರೆಯ ಸೂಚನೆ ಕೊಡದೇ ಹೋಗಬಹುದು. ಅವು ನೀವು ಮಲಗಿರುವಾಗ ವಿಶ್ರಾಂತಿಯ ಸಮಯದಲ್ಲಿ ಪ್ರಕಟವಾಗಬಹುದು. ನಿದ್ರೆಯ ಸಮಯದಲ್ಲಿ ಹೃದಯ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ಬಗ್ಗೆ ನೀವು ತಿಳಿದಿರುವುದು ಬಹಳ ಮುಖ್ಯ. ನಿಮ್ಮ ರಾತ್ರಿಯ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಈ 7 ಅಭ್ಯಾಸಗಳನ್ನು ಕೈಬಿಟ್ಟರೆ ನಿಮ್ಮ ಹೃದಯಕ್ಕೆ ನೀವೇ ಉತ್ತಮ ಆರೋಗ್ಯ ಗಿಫ್ಟ್‌ ಕೊಟ್ಟಂತೆ.

1) ಕಳಪೆ ನಿದ್ರೆಯ ಗುಣಮಟ್ಟ

    ನಿದ್ರೆಯೆಂದರೆ ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಸಮಯ. ಆಗಾಗ ಎಚ್ಚರಗೊಳ್ಳುವುದು, ನಿದ್ರಿಸಲು ತೊಂದರೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಇವೆಲ್ಲ ಹೃದಯ ರಕ್ತನಾಳದ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು. ದೀರ್ಘಕಾಲಿಕ ನಿದ್ರಾರಹಿತ ಸ್ಥಿತಿಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯು ಹೃದಯವನ್ನು ಆಯಾಸಗೊಳಿಸುವಂತಹ ಆಮ್ಲಜನಕದ ಮಟ್ಟದ ಏರಿಳಿತಗಳಿಗೆ ಕಾರಣವಾಗುತ್ತದೆ. ಅಸಮರ್ಪಕ ನಿದ್ರೆಯು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಹೆಚ್ಚಿಸಬಹುದು. ಇದು ಅಧಿಕ ರಕ್ತದೊತ್ತಡಕ್ಕೆ ಕೊಡುಗೆ ನೀಡುತ್ತದೆ.

3) ಲೇಟ್ ನೈಟ್ ಆಹಾರ ಸೇವನೆ

   ತಡರಾತ್ರಿಯಲ್ಲಿ ಆಹಾರ ಸೇವಿಸುವುದು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮಲಗುವ ಮೊದಲು ಹೆವ್ವಿ ಊಟ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ. ಅದು ಕಳಪೆ ಜೀರ್ಣಕ್ರಿಯೆ ಮತ್ತು ನಿದ್ರೆಯ ಕೊರತೆಗೆ ಕಾರಣವಾಗಬಹುದು. ಆಸಿಡ್ ರಿಫ್ಲಕ್ಸ್‌ ಹೆಚ್ಚಬಹುದು. ಇದು ಸ್ಲೀಪ್ ಅಪ್ನಿಯಾ ಇದ್ದರೆ ಅದನ್ನು ಉಲ್ಬಣಗೊಳಿಸುತ್ತದೆ. ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗದೆ ಇನ್ಸುಲಿನ್ ಪ್ರತಿರೋಧ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

4) ಅತಿಯಾದ ಆಲ್ಕೋಹಾಲ್

   ಕೆಲವರಿಗೆ ಒಂದು ಗ್ಲಾಸ್ ವೈನ್ ವಿಶ್ರಾಂತಿಗೆ ಪೂರಕವಾಗಬಹುದು. ಆದರೆ ಮಲಗುವ ಮುನ್ನ ಅತಿಯಾದ ಆಲ್ಕೊಹಾಲ್ ಸೇವನೆ ಹೃದಯದ ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟುಮಾಡಬಹುದು. ಆಲ್ಕೋಹಾಲ್ ನಿದ್ರೆ ತರುತ್ತದೆ ನಿಜ ಆದರೆ ನಿದ್ರೆಯ ತೊಂದರೆಗಳು ಕಾಣಿಸಬಹುದು. ಸ್ಲೀಪ್ ಅಪ್ನಿಯಾ ಅಪಾಯವನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯಪಾನ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಸದಾ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.

5) ಹೆಚ್ಚಿನ ಕೆಫೀನ್ ಸೇವನೆ

   ಕೆಫೀನ್ ಜನಪ್ರಿಯ ಉತ್ತೇಜಕ. ಆದರೆ ಅದು ನಿದ್ರೆಗೆ ಅಡ್ಡಿ. ಕೆಫೀನ್ ಅನ್ನು ತಡ ಸಂಜೆ ಅಥವಾ ರಾತ್ರಿ ಸೇವಿಸುವುದರಿಂದ ನಿದ್ರಿಸಲು ಕಷ್ಟ. ಕಳಪೆ ನಿದ್ರೆಯ ಗುಣಮಟ್ಟ ಹಿಂದೆ ಹೇಳಿದಂತೆ ಹೃದಯರಕ್ತನಾಳದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಕೆಫೀನ್ ಸೇವನೆ ಹೆಚ್ಚಿದ ರಕ್ತದೊತ್ತಡ ಮತ್ತು ಹೃದಯ ಬಡಿತಕ್ಕೆ ಕಾರಣ. ಇವೆರಡೂ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಮಲಗುವ ಮುನ್ನ ಕೆಫೀನ್ ಸೇವನೆಯನ್ನು ಮಿತಿಗೊಳಿಸುವುದು ಆರೋಗ್ಯಕರ ಹೃದಯ ಕಾಪಾಡಿಕೊಳ್ಳಲು ಅನಿವಾರ್ಯ. 

6) ಸದಾ ಕುಳಿತುಕೊಳ್ಳುವುದು

   ಸಂಜೆ ಸಾಮಾನ್ಯವಾಗಿ ದೈಹಿಕ ಚಟುವಟಿಕೆ ಒಳ್ಳೆಯದು. ಸಂಜೆಯ ವಾಕಿಂಗ್ ಉತ್ತಮ. ಆದರೆ ಸದಾ ಕುಳಿತುಕೊಂಡಿರುವ ಜಡ ಜೀವನಶೈಲಿ ಒಳ್ಳೆಯದಲ್ಲ. ವಿಶೇಷವಾಗಿ ಮಲಗುವ ಮೊದಲಿನ ಗಂಟೆಗಳಲ್ಲಿ ದೀರ್ಘಾವಧಿ ಕುಳಿತುಕೊಳ್ಳುವುದು ಹೃದಯದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಉಂಟುಮಾಡಬಹುದು. ದೀರ್ಘಾವಧಿಯವರೆಗೆ ಕಳಪೆ ಭಂಗಿಯಲ್ಲಿ ಕುಳಿತಿರುವುದು ಇನ್ನೂ ಹಾನಿಕರ. ಅದು ತೂಕ ಹೆಚ್ಚಳ, ಕಳಪೆ ರಕ್ತಪರಿಚಲನೆ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಸ್ಟ್ರೆಚಿಂಗ್ ಅಥವಾ ಸಣ್ಣ ನಡಿಗೆಯಂತಹ ಲಘು ದೈಹಿಕ ಚಟುವಟಿಕೆ ಸಂಜೆ ಹೊತ್ತಿನಲ್ಲಿ ಸೂಕ್ತ.

7) ನಿರ್ವಹಿಸದ ಒತ್ತಡ

   ನೀವು ಮಲಗಲು ಹೋದಾಗ ಒತ್ತಡವು ಮಾಯವಾಗುವುದಿಲ್ಲ. ವಾಸ್ತವವಾಗಿ ಅದು ರಾತ್ರಿಯವರೆಗೆ ನಿಮ್ಮನ್ನು ಹಿಂಬಾಲಿಸುತ್ತದೆ ಮತ್ತು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಒತ್ತಡ ಮತ್ತು ಆತಂಕ ಒತ್ತಡದ ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ಅತಿಯಾದ ಚಿಂತೆ ಅಥವಾ ಮಲಗುವ ಮುನ್ನ ನಕಾರಾತ್ಮಕ ಚಿಂತನೆ ಬೇಡ. ವಿಶ್ರಾಂತಿ ತಂತ್ರಗಳು ಅಥವಾ ಸಾವಧಾನತೆಗಳಂತಹ ಶಾಂತಗೊಳಿಸುವ ರಾತ್ರಿಯ ದಿನಚರಿ ಅಗತ್ಯ.

Recent Articles

spot_img

Related Stories

Share via
Copy link
Powered by Social Snap