ಬೆಂಗಳೂರು : ಕ್ಯಾಬ್‌ ಬುಕ್‌ ಮಾಡುವ ಮುನ್ನ ಎಚ್ಚರ

ಬೆಂಗಳೂರು: 

   ವಿಮಾನ ನಿಲ್ದಾಣದಿಂದ ತಾವರೆಕೆರೆಗೆ ಪ್ರಯಾಣಿಸಲು ಕ್ಯಾಬ್ ಚಾಲಕನೊಬ್ಬ ವಿಪರೀತ ಹಣಕ್ಕೆ ಬೇಡಿಕೆ ಇಟ್ಟಿರುವ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.

   ಬುಕ್ಕಿಂಗ್ ವೇಳೆ ಪ್ರಯಾಣಿಕರಿಗೆ 914 ರೂ. ಹಣ ಡಿಸ್ ಪ್ಲೇ ಆಗಿತ್ತು, ಆದರೆ ಆ ಹಣಕ್ಕೆ ಬದಲಾಗಿ 5,194 ರೂ.ಗಳನ್ನು ಪಾವತಿಸುವಂತೆ ಚಾಲಕ ಒತ್ತಾಯಿಸಿದ್ದಾನೆ. ಈ ಸಂಬಂಧ ಊಬರ್ ಕ್ಯಾಬ್ ಚಾಲಕ ಭರತ್ ಗೌಡ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಲೊಯಿಯಂ ಖುಮಾನ್ ಎಂಬವರು ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.

   ಜನವರಿ 5 ರಂದು ಬೆಳಿಗ್ಗೆ ಘಟನೆ ಸಂಭವಿಸಿತ್ತು, ಆದರೆ ಅವರು ಕೆಲಸದಲ್ಲಿ ನಿರತರಾಗಿದ್ದರಿಂದ ಫೆಬ್ರವರಿ 13 ರಂದು ಪ್ರಕರಣ ಬುಕ್ ಮಾಡಿದ್ದಾಗಿ ತಿಳಿಸಿದ್ದಾರೆ.

   ಓಲಾ, ಊಬರ್ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಿದ ಸರ್ಕಾರ

ನನ್ನ ಸ್ನೇಹಿತರ ಜೊತೆ KIA ಯ ಟರ್ಮಿನಲ್ 1 ರಲ್ಲಿ ಇಳಿದ ನಂತರ, ನಾನು ತಾವರೆಕೆರೆಯಲ್ಲಿರುವ ನನ್ನ ಮನೆಗೆ ಮರಳಲು ಕ್ಯಾಬ್‌ಗಾಗಿ ಹುಡುಕುತ್ತಿದ್ದೆ. ಆ ವೇಳೆ ಉಬರ್ ಕ್ಯಾಬ್ ಡ್ರೈವರ್ ನನ್ನ ಹತ್ತಿರ ಬಂದು ನನ್ನನ್ನು ಕರೆದುಕೊಂಡು ಹೋದ. ಆನ್‌ಲೈನ್ ಬುಕಿಂಗ್‌ನಂತೆ, ಪಾವತಿಸಬೇಕಾದ ಮೊತ್ತ 914 ಆಗಿತ್ತು,

   ನಾನು ಅವರಿಗೂ ಮೊತ್ತವನ್ನು ಪ್ರದರ್ಶಿಸಿದೆ. ಆದಾಗ್ಯೂ, ಸ್ಟರ್ಲಿಂಗ್ ನೆಸ್ಟ್ ಅಪಾರ್ಟ್‌ಮೆಂಟ್‌ ನಲ್ಲಿರುವ ನನ್ನ ಮನೆಗೆ ತಲುಪಿದಾಗ, 5,194 ರು. ಆಗಿದೆ ಎಂದು ಅವರು ನನಗೆ ಹೇಳಿದರು. ಅವರ ಉಬರ್ ಅಪ್ಲಿಕೇಶನ್ ಈ ಅಂಕಿ ಅಂಶವನ್ನು ತೋರಿಸುತ್ತಿದೆ ಹೀಗಾಗಿ ಅಷ್ಟು ಹಣವನ್ನು ಪಾವತಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.

  ಐಪಿಸಿಯ ಸೆಕ್ಷನ್ 417, 471 ಮತ್ತು 465 ರ ಅಡಿಯಲ್ಲಿ ವಂಚನೆ ಮತ್ತು ಅಧಿಕ ಶುಲ್ಕ ವಿಧಿಸಿದ್ದಕ್ಕಾಗಿ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

   ಈ ಹಿಂದೆ ಜನವರಿಯಲ್ಲಿ, ಪಶ್ಚಿಮ ಬಂಗಾಳದ ಕಾಲೇಜು ವಿದ್ಯಾರ್ಥಿಯನ್ನು ಓಲಾ ಕ್ಯಾಬ್ ಡ್ರೈವರ್ ರೈಡ್‌ಗಾಗಿ ಕೆಐಎಯಿಂದ ಮತ್ತಿಕೆರೆಗೆ ಕರೆದೊಯ್ದಿದ್ದ. ಕ್ಯಾಬ್ ಬುಕ್ ಮಾಡುವಾಗ ಪ್ರದರ್ಶಿಸಿದ 730 ರೂ. ಬದಲಿಗೆ 5,194 ರೂ.ಹಣ ತೋರಿಸಿತ್ತು.