ಬೆಂಗಳೂರು:
ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
17 ವರ್ಷದ ಯುವಕ ಹೆಲ್ಮೆಟ್ ಧರಿಸದೆ, ಲೈಸೆನ್ಸ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವೇಳೆ ತೀರ್ಥಹಳ್ಳಿ ಪೊಲೀಸರು ಸೋಮವಾರ ತಪಾಸಣೆ ಮಾಡುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಸಂಚಾರ ನಿಯಮ ಉಲ್ಲಂಘನೆ, ಅಪ್ರಾಪ್ತ ಯುವಕನಿಗೆ ಬೈಕ್ ನೀಡಿದ ತಪ್ಪಿಗೆ ಕಳ್ಳಿ ಗದ್ದೆ ಗ್ರಾಮದ ಮಾಲೀಕ ಪ್ರಮೋದ್ (25) ಎಂಬಾತನ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ತೀರ್ಥಹಳ್ಳಿಯ ಜೆಎಂಎಫ್ಸಿ ನ್ಯಾಯಾಲಯ ಬೈಕ್ ಮಾಲೀಕ ಪ್ರಮೋದ್ಗೆ 20 ಸಾವಿರ ರೂ. ದಂಡ ವಿಧಿಸಿದೆ. ಇನ್ನಾದರೂ ಅಪ್ರಾಪ್ತರಿಗೆ ಬೈಕ್ ಕೊಡೋ ಮುಂಚೆ ಎಚ್ಚರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/06/traffic-fnes.jpg)