ಮಧುಗಿರಿ :
ಎಸ್ ಎಸ್ ಎಲ್ ಸಿ ಪರೀಕ್ಷೆಯ ವಿಜ್ಞಾನ ವಿಷಯದ ಮೌಲ್ಯಂಕನದಲ್ಲಿ ತೊಡಗಿದ್ದ ಒಟ್ಟು 5 ಜನರ ಮೇಲೆ ಹೆಜ್ಜೇನು ದಾಳಿ ನಡೆಸಿವೆ.
ಪಟ್ಟಣದ ತುಮಕೂರು ಗೇಟ್ ಬಳಿಯಿರುವ ಚೇತನ ಆಂಗ್ಲ ಮಾಧ್ಯಮಾ ಶಾಲೆಯಲ್ಲಿ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಂಕನ ಮಾಡುವಾಗ ಶಾಲೆಯ ಮೂರನೇ ಮಹಡಿಯಲ್ಲಿದ್ದ ಹೆಜ್ಜೇನು ನೊಣಗಳು ಶಿಕ್ಷಕರ ಮೇಲೆ ಆಕಸ್ಮಿಕ ವಾಗಿ ದಾಳಿ ನಡೆಸಿವೆ , ಪಾವಗಡ ಶಾಲೆಯ ಶಿಕ್ಷಕ ಮಂಜುನಾಥ್ ,(42) ಮಾರುತೇಶ್ ಕುಮಾರ್ (35), ರಾಜಬಾಬು (52)ಹಾಗೂ ಶಾಲೆಯ ಇಬ್ಬರು ಆಯಾಗಳ ಮೇಲೆ ಹೆಜ್ಜೇನು ನೊಣಗಳು ದಾಳಿ ನಡೆಸಿವೆ ಮಂಜುನಾಥ್ ರವರು ಗಂಭೀರವಾಗಿ ಕಡಿತಕ್ಕೆ ಒಳಗಾದರೆ
ಉಳಿದ ನಾಲ್ವರ ಮೇಲೆ ಐದರಿಂದ ಆರು ಹೆಜ್ಜೇನು ನೊಣಗಳು ಕಡಿದಿವೆ ಮಂಜುನಾಥ್ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 150 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ.