ಬೆಳಗಾವಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ

ಬೆಳಗಾವಿ

    ಕರ್ನಾಟಕದಲ್ಲಿ ಪ್ಯಾಲೆಸ್ತೀನ್ ದೇಶದ ಪರ ಘೋಷಣೆ ಮತ್ತು ಧ್ವಜ ಹಾರಾಟ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಚಿಕ್ಕಮಗಳೂರು , ಕೋಲಾರ  ಬಳಿಕ ಇದೀಗ ಬೆಳಗಾವಿ   ನಗರದ ದರ್ಬಾರ್ ಗಲ್ಲಿಯಲ್ಲಿ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಹಾಕಿದ್ದಾರೆ.

   ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಯನ್ನು ನಾಳೆ (ಸೆಪ್ಟೆಂಬರ್ 22ಕ್ಕೆ) ಮುಂದೂಡಲಾಗಿದೆ. ಈದ್​ ಮಿಲಾದ್​ ಮೆರವಣಿಗೆ ಸಾಗುವ ದರ್ಬಾರ್ ಗಲ್ಲಿಯ 200 ಮೀಟರ್​ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಹಾಕಲಾಗಿದೆ. ಇದನ್ನು ಕಂಡ ಮಾರ್ಕೆಟ್ ಠಾಣೆ ಪೊಲೀಸರು ಪೊಲೀಸರು ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ತೆರವುಗೊಳಿಸಿದ್ದಾರೆ. ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಕಟ್ಟಿದವರ ಬಗ್ಗೆ ಮಾರ್ಕೆಟ್ ಠಾಣೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

   ಈದ್ ಮಿಲಾದ್​ ಮೆರವಣಿಗೆ ವೇಳೆ ಕೋಲಾರದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಲಾಗಿತ್ತು. ಕೂಡಲೆ ಎಚ್ಚೆತ್ತ ಪೊಲೀಸರು ಪ್ಯಾಲೆಸ್ತೀನ್ ಧ್ವಜ ಹಾರಿಸದಂತೆ, ರಾಷ್ಟ್ರ ಧ್ವಜ ಹಾರಿಸುವಂತೆ ಮುಸ್ಲಿಂ ಮುಖಂಡರಿಗೆ ಸೂಚಿಸಿದರು. ಇನ್ನು, ಚಿತ್ರದುರ್ಗದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿತ್ತು. ಇದಕ್ಕೂ ಮುನ್ನ ಚಿಕ್ಕಮಗಳೂರಿನಲ್ಲಿ ನಾಲ್ವರು ಅಪ್ರಾಪ್ತರು ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್​ ಮೇಲೆ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

  ಪ್ಯಾಲೆಸ್ತೀನ್‌ ದೇಶಕ್ಕೆ ಕೇಂದ್ರ ಸರ್ಕಾರವೇ ಬೆಂಬಲ ನೀಡಿದೆ. ಹೀಗಾಗಿ ಆ ದೇಶದ ಧ್ವಜ ಹಿಡಿದರೆ ತಪ್ಪೇನೂ ಇಲ್ಲ. ನಮ್ಮ ದೇಶದಲ್ಲಿ ಬೇರೆ ದೇಶದ ಪರ ಘೋಷಣೆ ಕೂಗಬಾರದು. ಹಾಗೆ ಮಾಡಿದರೆ ದೇಶದ್ರೋಹವಾಗುತ್ತದೆ ಎಂದ ಸಚಿವ ಜಮೀರ್ ಅಹಮದ್‌ ಖಾನ್ ಸಮರ್ಥನೆ ಮಾಡಿಕೊಂಡಿದ್ದರು.

Recent Articles

spot_img

Related Stories

Share via
Copy link