ತಾಯಿ ಇಲ್ಲದ ಬಾಲಕಿಯ ಕತ್ತು ಹಿಸುಕಿ ಹತ್ಯೆ

ಬೆಂಗಳೂರು

    ರಾಜಧಾನಿ ಬೆಂಗಳೂರಿನಲ್ಲಿ  ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬೋಳಾರೆ ಗ್ರಾಮದ ಬಳಿ ಕವನ ಎಂಬ 15 ವರ್ಷದ ಬಾಲಕಿಯನ್ನು ಕತ್ತು ಕಿಸುಕಿ ಕೊಲೆ ಮಾಡಲಾಗಿದೆ. ತಾಯಿ ಇಲ್ಲದ ಬಾಲಕಿ ಕವನ, ಸಾವಿತ್ರಮ್ಮ ಎಂಬವರ ಜೊತೆ ವಾಸವಾಗಿದ್ದಳು. ಕವನಳ ತಂದೆ ಬೇರೆ ಕಡೆ ವಾಸವಾಗಿದ್ದರು.

    ನಿನ್ನೆ ಮಧ್ಯಾಹ್ನ ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ನಂತರ ಹುಡುಕಾಡಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಹತ್ಯೆಯ ಹಿಂದಿನ ನಿಖರ ಕಾರಣ ಗೊತ್ತಾಗಿಲ್ಲ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಲಾಗುತ್ತಿದೆ. ಬಾಲಕಿಯ ಪರಿಚಿತರು ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.  

Recent Articles

spot_img

Related Stories

Share via
Copy link