ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಬೆಸ್ಕಾಂ…!

ಬೆಂಗಳೂರು

     ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅರ್ಹ ಎಂಎಸ್‌ಎಂಇ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ರಿಯಾಯಿತಿ ಘೋಷಿಸಿದೆ.

     ಈ ಮೂಲಕ ಎಂಎಸ್‌ಎಂಇ (MSME) ವಲಯವನ್ನು ಪ್ರೋತ್ಸಾಹಿಸುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಗ್ರಾಹಕರಿಗೆ ಬೆಸ್ಕಾಂ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯುನಿಟ್ಇ ವಿದ್ಯುತ್ ಗೆ 50 ಪೈಸೆ ರಿಯಾಯಿತಿ ಘೋಷಣೆ ಮಾಡಿದೆ. ಈ ಕುರಿತು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

     ಈ ಹಿಂದೆ ಚಂದ್ರಯಾನ 3 ಯಶಸ್ವಿಯಾಗಿದ್ದಕ್ಕೆ ವಿಬಿನ್ನವಾಗಿ ಬೆಸ್ಕಾಂ ಇಸ್ರೋಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಹೆಮ್ಮೆ ವ್ಯಕ್ತಪಡಿಸಿತ್ತು. ‘ಭೂಮಿಯೇ ಆಗಿರಲಿ, ಇಲ್ಲ ಚಂದ್ರನ ಅಂಗಳವೇ ಆಗಿರಲಿ ವಿದ್ಯುತ್ ಸೇವೆಯೊಂದೆ ನಮ್ಮ ಗುರಿ’ ಎಂದು ಚಂದ್ರಯಾನದ ಯಶಸ್ಸಿನ ಕುರಿತು ಬೆಸ್ಕಾಂ ಪೋಸ್ಟ್ ಹಾಕಿತ್ತು. ಈ ಮೂಲಕ ಭೂಮಿ ಮಾತ್ರವಲ್ಲದೇ ಚಂದ್ರನ ಮೇಲೂ ನಾವು ವಿದ್ಯುತ್ ಪೂರೈಕೆ ಸಿದ್ಧರಿದ್ದೇವೆ ಎಂದು ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿತ್ತು.

     ಪಾಕ್ ವಿದೇಶಾಂಗ ಇಲಾಖೆ ವಕ್ತಾರೆ ಜಹ್ರಾ ಬಲೂಚ್ ಮೆಚ್ಚುಗೆ ಬೆಸ್ಕಾಂ ನೀಡಿದ ವಿಶೇಷ ಸೂಚನೆ ಹೀಗಿದೆ ಇದರ ಬೆನ್ನಲ್ಲೆ ಇದೀಗ ಎಂಎಸ್‌ಎಂಇ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಪ್ರತಿ ಯುನಿಟ್‌ಗೆ 50 ಪೈಸೆ ರಿಯಾಯಿತಿ ಘೋಷಣೆ ಮಾಡಿದೆ. ಯಾರು ಯಾರು ಬೆಸ್ಕಾಂ ವ್ಯಾಪ್ತಿಯ ಎಲ್‌ಟಿ ಜಕಾತಿಯ ಎಂಎಸ್‌ಎಂಇ ಗ್ರಾಹಕರಿಗೆ ವಿದ್ಯುತ್ ರಿಯಾಯಿತಿ ಸೌಲಭ್ಯ ದೊರೆಯಲಿದೆ.

     ಈ ಸಂಬಂಧ ಅರ್ಜಿ ಸಲ್ಲಿಸುವ ಗ್ರಾಹಕರು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆ ಇಲ್ಲವೇ ಉದ್ಯಮ್ ಪ್ರಯಾಣ ಪತ್ರವನ್ನು ಹೊಂದಿರಬೇಕು. ಅಂತವರು ವಿದ್ಯುತ್ ರಿಯಾಯಿತಿ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಬೆಸ್ಕಾಂ ತಿಳಿಸಿದೆ.

   ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಜನರಿಗೆ 200 ಯುನಿಟ್‌ರೆಗೆ ವಿದ್ಯುತ್ ಅನ್ನು ‘ಗೃಹ ಜ್ಯೋತಿ’ ಯೋಜನೆಯಡಿ ಪೂರೈಸುವುದಾಗಿ ತಿಳಿಸಿದೆ. ಇದೀಗ ಇದರ ಬೆನ್ನಲ್ಲೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ (MSME) ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್ ವಿದ್ಯುತ್‌ಗೆ 50 ಪೈಸೆ ರಿಯಾಯಿತಿ ಘೋಷಣೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap